ಶಿರಸಿ: ಬಿಜೆಪಿ ಅಲ್ಪ ಸಂಖ್ಯಾತರ ವಿಭಾಗದ ತಾಲೂಕಾಧ್ಯಕ್ಷ ಅನೀಸ್ ತಹಸೀಲ್ದಾರ್‌ಗೆ ಅನಾಮಿಕರು ಚೂರಿ ಇರಿದ ಘಟನೆ ಮತ್ತು ಈ ಸ್ಥಳದ ಸಮೀಪದಲ್ಲಿಯೇ ವ್ಯಕ್ತಿಯೋರ್ವ ಕೊಲೆಯಾದ ಭಯಾನಕ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ನಗರದ ಕಸ್ತೂರಬಾ ನಗರದಲ್ಲಿ
ಮಂಗಳವಾರ ತಡರಾತ್ರಿ ನಡೆದಿದೆ. 

ಚುನಾವಣೆ ಕಾರ್ಯ ಮುಗಿಸಿ ಅನೀಸ್ ತಹಸೀಲ್ದಾರ್ ಮನೆಗೆ ಹೋಗುತ್ತಿರುವ ವೇಳೆ ಅವರ ಕಾರಿಗೆ ಹಿಂದಿನಿಂದ ಯಾರೋ ವಾಹನ ತಂದು ಗುದ್ದಿಸಿದ್ದಾರೆ. ಕೆಳಗಿಳಿದ ಅನೀಸ್‌ಗೆ ಚೂರಿಯಿಂದ ಇರಿಯಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಅನೀಸ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 

ಈ ಘಟನೆ ನಡೆದ ಸ್ಥಳದ 150 ಮೀ. ದೂರದ ಖಾಲಿ ಜಾಗದಲ್ಲಿ ಕಸ್ತೂರಬಾ ನಗರದವರೇ ಆದ ಅಸ್ಸಲಾಂ ಸಯ್ಯದ್ (25) ಅವರ ಮೃತ ದೇಹ ಪತ್ತೆಯಾಗಿದೆ. ರಾಡಿನಿಂದ ಹಲ್ಲೆ ನಡೆಸಿ ಅವರನ್ನು ಕೊಲೆ ಮಾಡಿರುವ ಕುರುಹುಗಳು ಪತ್ತೆಯಾಗಿವೆ.