ಶಿಕ್ಷಣ ಇಲಾಖೆಯ ಮಹಾ ಯಡವಟ್ಟು : ಎರಡೆರಡೂ ಬಾರಿ ಪರೀಕ್ಷೆ ಬರೆದ ಎಸ್‌ಎಸ್ಎಲ್‌ಸಿ ವಿಧ್ಯಾರ್ಥಿಗಳು

SSLC Students write exam 2 times
Highlights

ವಿಧ್ಯಾರ್ಥಿಗಳು ಎಚ್ಚೆತ್ತು ಶಿಕ್ಷಕರಿಗೆ ಮನವಿ ಮಾಡಿಕೊಂಡರೂ ಇಲಾಖೆ ಅದೇ ಪ್ರಶ್ನೆ ಪತ್ರಿಕೆಯಿಂದ ಪರೀಕ್ಷೆ ಬರೆಸಿದ್ದಾರೆ. ಪರೀಕ್ಷೆ ಮುಗಿದ ಬಳಿಕ ಮತ್ತೊಂದು ಬಾರಿ ಸಿಬ್ಬಂದಿ ಪರೀಕ್ಷೆ ಬರೆಸಿದ್ದಾರೆ.

ಹುಬ್ಬಳ್ಳಿ(ಮಾ.23): ಶಿಕ್ಷಣ ಇಲಾಖೆಯ ಮಹಾ ಯಡವಟ್ಟಿನಿಂದ ಎಸ್‌ಎಸ್ಎಲ್‌ಸಿ ವಿಧ್ಯಾರ್ಥಿಗಳು ಎರಡೆರಡೂ ಬಾರಿ ಪರೀಕ್ಷೆ ಬರೆದು ತೊಂದರೆ ಅನುಭವಿಸಿದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳದ ಶಿವಾನಂದ ಮಠ ಶಾಲೆಯಲ್ಲಿ ನಡೆದಿದೆ.

ರೆಗ್ಯೂಲರ್ ವಿಧ್ಯಾರ್ಥಿಗಳಿಗೆ, ಎಕ್ಸಟ್ರ್‌ನಲ್ ಪ್ರಶ್ನಾ ಪತ್ರಿಕೆ ವಿತರಿಸಲಾಗಿದೆ. ವಿಧ್ಯಾರ್ಥಿಗಳು ಎಚ್ಚೆತ್ತು ಶಿಕ್ಷಕರಿಗೆ ಮನವಿ ಮಾಡಿಕೊಂಡರೂ ಇಲಾಖೆ ಅದೇ ಪ್ರಶ್ನೆ ಪತ್ರಿಕೆಯಿಂದ ಪರೀಕ್ಷೆ ಬರೆಸಿದ್ದಾರೆ. ಪರೀಕ್ಷೆ ಮುಗಿದ ಬಳಿಕ ಮತ್ತೊಂದು ಬಾರಿ ಸಿಬ್ಬಂದಿ ಪರೀಕ್ಷೆ ಬರೆಸಿದ್ದಾರೆ. ಇಂದು ಪ್ರಥಮ ಭಾಷೆ ಕನ್ನಡ ಪರೀಕ್ಷೆಯಿತ್ತು. ಎರಡು ಬಾರಿ ಪರೀಕ್ಷೆ ಬರೆಸಿದ ಕಾರಣ ಪಾಲಕರು ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಇಷ್ಟೆಲ್ಲಾ ನಡೆದರೂ ಶಿಕ್ಷಣ ಇಲಾಖೆ ಸುಮ್ಮನೆ ಕುಳಿತಿರುವುದು ಪಾಲಕರ ಆತಂಕಕ್ಕೆ ಕಾರಣವಾಗಿದೆ.

loader