ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಮತ್ತೊಮ್ಮೆ ಶಾಲೆಯಲ್ಲಿ ಪ್ರವೇಶ ಪಡೆದು 10 ನೇ ತರಗತಿ ಪರೀಕ್ಷೆ ಬರೆಯಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಅವಕಾಶ ಕಲ್ಪಿಸಿದೆ. ಇದೇ ಮೊದಲ ಬಾರಿಗೆ ಶಿಕ್ಷಣ ಇಲಾಖೆಯು ಈ ರೀತಿಯ ಹೊಸ ಅವಕಾಶವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿದೆ.

ಇದರಿಂದ ವಿದ್ಯಾರ್ಥಿಗಳು ರೆಗ್ಯೂಲರ್ ವಿದ್ಯಾರ್ಥಿಗಳ ಜತೆಯಲ್ಲಿ ಕಲಿಯುವ ಶಾಲೆಗೆ ಹೋಗುವ ಜತೆಗೆ, ಮುಂದಿನ ವ್ಯಾಸಂಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಪ್ರಸಕ್ತ ಸಾಲಿನಲ್ಲಿ ಅನುತ್ತೀರ್ಣಗೊಂಡ ವಿಷಯಗಳು ಮತ್ತು ಹಳೆಯ ವಿದ್ಯಾರ್ಥಿ ಎಂಬುದಾಗಿ ಪರಿಗಣಿಸುವುದಿಲ್ಲ. ಹೊಸ ವಿದ್ಯಾರ್ಥಿ ಎಂಬುದಾಗಿಯೇ ಅಂಕಪಟ್ಟಿ ನೀಡಲಾಗುತ್ತದೆ.

ಈ ವಿದ್ಯಾರ್ಥಿಗಳು ಆರು ವಿಷಯಗಳಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ. ಹೊಸ ವಿದ್ಯಾರ್ಥಿಗಳಿಗೆ ಅನುಸರಿಸುವ ಎಲ್ಲ ಮಾನದಂಡಗಳನ್ನು ಅನುಸರಿಸಿ ಮರು ಪ್ರವೇಶ ದಾಖಲಾತಿ ನೀಡಲಾಗುತ್ತದೆ. ಎಂದಿನಂತೆ ಶಾಲೆಗಳಿಗೆ ಹೋಗಿ ಕಿರು ಪರೀಕ್ಷೆ ಎದುರಿಸಿ, ಆಂತರಿಕ ಅಂಕಗಳನ್ನು ಸಹ ಪಡೆಯಬೇಕಾಗುತ್ತದೆ. 

(ಸಾಂದರ್ಭಿಕ ಚಿತ್ರ]