Asianet Suvarna News Asianet Suvarna News

ಸಚಿವರು ಗೈರು, ಸ್ಪೀಕರ್ ಗರಂ

  • ‘ಇದೇನಿದು ಇವರುಗಳು ಸದನಕ್ಕೆ ಬರ್ತಿಲ್ಲ, ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ’
  • ಹೀಗಾದ್ರೆ ಹೇಗೆ? ಸಚಿವರಿಗೆ ಸದನದಲ್ಲಿ ಕೂರುವುದು ಬಿಟ್ಟು ಇನ್ನೇನು ಕೆಲಸ ಇದೆ?

ಬೆಂಗಳೂರು:  ‘ಇದೇನಿದು ಇವರುಗಳು ಸದನಕ್ಕೆ ಬರ್ತಿಲ್ಲ, ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ’ ಎಂದು ರಾಜ್ಯಪಾಲರ ಭಾಷಣಕ್ಕೆ ವಂದಾನಾರ್ಪಣೆ ವೇಳೆ ಸ್ಪೀಕರ್ ರಮೇಶ್ ಕುಮಾರ್ ಗರಂ ಆಗಿದ್ದಾರೆ.

6ಮಂದಿ ಮಾತ್ರ ಇದ್ದಾರೆ, ಉಳಿದವರು ಎಲ್ಲಿ ಹೋದ್ರು? ಹೀಗಾದ್ರೆ ಹೇಗೆ?  15 ನಿಮಿಷ ಸಮಯ ಕೊಡ್ತೀನಿ, ಸಚಿವರು ಹಾಜರಿರಬೇಕು. ಸಚಿವರಿಗೆ ಸದನದಲ್ಲಿ ಕೂರುವುದು ಬಿಟ್ಟು ಇನ್ನೇನು ಕೆಲಸ ಇದೆ? ಸದನವನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ರೆ ಸಹಿಸಿಕೊಳ್ಳುವುದಿಲ್ಲ ಎಂದು ರಮೇಶ್ ಕುಮಾರ್ ಖಡಕ್ಎಚ್ಚರಿಕೆ ನೀಡಿದ್ದಾರೆ.

ಎಚ್. ಡಿ. ರೇವಣ್ಣ, ಬಂಡೆಪ್ಪ ಕಾಶೆಂಪುರ್, ಎಂ.ಸಿ. ಮನಗೋಳಿ, ಸಿ.ಎಸ್ ಪುಟ್ಟರಾಜು, ಸಾ.ರಾ. ಮಹೇಶ್, ಡಿ.ಕೆ. ಶಿವಕುಮಾರ್ , ಪ್ರಿಯಾಂಕ್ ಖರ್ಗೆ, ಶಿವಾನಂದ ಪಾಟೀಲ್ ಇರಬೇಕು, ಕೆಲವರು ಮಾತ್ರ ಇದ್ದಾರೆ ಎಂದ ಸ್ಪೀಕರ್, ಸಚಿವರು ಎಲ್ಲಿಯಾದ್ರು ಹೋಗಬೇಕಂದ್ರೆ ನನ್ನ ಅನುಮತಿ ಪಡೆಯಬೇಕು ಎಂದಿದ್ದಾರೆ.

ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿ ಶಾಸಕ ರಾಜೀವ್, ಸಚಿವರ ವಿಚಾರ ಬಂದಾಗ ಹಾರ್ಡ್ ಆಗ್ತೀರಿ, ಅಧಿಕಾರಿಗಳ ವಿಚಾರದಲ್ಲಿ ಸಾಫ್ಟ್ ಏಕೆ ಎಂದ ಪ್ರಶ್ನಿಸಿದರು. ಅದಕ್ಕೆ ಸ್ಪೀಕರ್, ನಾನು ಸಾಫ್ಟೂ ಅಲ್ಲ,ಹಾರ್ಡೂ ಅಲ್ಲ ನ್ಯೂಟ್ರಲ್ ಎಂದು ಪ್ರತಿಕ್ರಿಯಿಸಿದರು.