ಬೆಂಗಳೂರು[ಜ.21]  ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಹಿನ್ನೆಲೆಯಲ್ಲಿ ಜನವರಿ 22 ರಂದು ನಡೆಯಬೇಕಿದ್ದ ದ್ವಿತೀಯ ಪಿಯು ಪೂರಕ ಪರೀಕ್ಷೆ ಮುಂದೂಡಲಾಗಿದೆ.  ಇಂಗ್ಲೀಷ್ ಪರೀಕ್ಷೆ ಮುಂದೂಡಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದೆ.

ಶ್ರೀ ದರ್ಶನಕ್ಕೆ ಪ್ರಧಾನಿ ಮೋದಿ ಬರಲ್ಲ, ಕಾರಣಕೊಟ್ಟ ಯಡಿಯೂರಪ್ಪ

ಬುಧವಾರ ಅಂದರೆ ಜನವರಿ 23 ರಂದು ಪರೀಕ್ಷೆ ನಡೆಯಲಿದೆ ಎಂದು ತಿಳಿಸಲಾಗಿದೆ. ಅಪಾರ ಭಕ್ತಗಣವನ್ನು ಬಿಟ್ಟು ನಡೆದಾಡುವ ದೇವರು ನಡೆದಿದ್ದಾರೆ. ಆದರೆ ಅವರು ಬಿಟ್ಟು ಹೋದ ನಂಬಿಕೆ, ಶ್ರದ್ಧೆ, ವಿಶ್ವಾಸ ಎಂದೆಂದಿಗೂ ಶಾಶ್ವತವಾಗಿರುತ್ತದೆ. ಮಂಗಳವಾರ ಸ್ವಾಮೀಜಿ ಅವರಿಗೆ ಅಂತಿಮ ನಮನ ಸಲ್ಲಿಸಲಾಗುವುದು.

ತುಮಕೂರಿನಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ದೇಶದ ವಿವಿಧ ಕಡೆಯಿಂದ ಗಣ್ಯರು ಆಗಮಿಸಿ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಲಿದ್ದಾರೆ.

ಸಿದ್ಧಗಂಗಾ ಸ್ವಾಮೀಜಿ ಸಕಲ ಸುದ್ದಿಗಳು