Asianet Suvarna News Asianet Suvarna News

ಪ್ರವಾಹದ ಬಳಿಕ ಭಕ್ತರಿಗೆ ತೆರೆದ ಶಬರಿಮಲೆ : ಹೊಸ ರೂಲ್ಸ್

ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ಬಳಿಕ ಇದೀಗ ಮೊದಲ ಬಾರಿಗೆ ಇದೀಗ ಭಕ್ತರಿಗೆ ಮತ್ತೆ ದೇವಾಲಯವನ್ನು ದರ್ಶನಕ್ಕಾಗಿ ತೆರೆಯಲಾಗಿದೆ. ಅಲ್ಲದೇ ಭಕ್ತರಿಗೆ ಕೆಲವೊಂದು ಹೊಸ ನಿಯಮಗಳನ್ನು ರೂಪಿಸಲಾಗಿದೆ. 

Sabarimala Temple Reopens For Devotees
Author
Bengaluru, First Published Sep 18, 2018, 1:46 PM IST

ಶಬರಿಮಲೆ :  ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಬಳಿಕ ಇದೀಗ ಮೊದಲ ಬಾರಿಗೆ ಶಬರಿಮಲೆ ದೇವಾಲಯವನ್ನು ಅಯ್ಯಪ್ಪ ಭಕ್ತರಿಗೆ ದೇವರ ದರ್ಶನ ಪಡೆದುಕೊಳ್ಳಲು ಮುಕ್ತಗೊಳಿಸಲಾಗಿದೆ. 

ಸೋಮವಾರದಿಂದ ಭಕ್ತರ ದರ್ಶನಕ್ಕೆ ತೆರೆಯಲಾಗಿದ್ದು, ಆದರೆ ಇದೇ ವೇಳೆ ಭಕ್ತರಿಗೆ ಕೆಲವೊಂದು ನಿಯಮಗಳನ್ನು ತಿಳಿಸಲಾಗಿದೆ.  

ನಿಲಯಕ್ಕಲ್ ವರೆಗೆ ಭಕ್ತರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಭಕ್ತರು ಇಲ್ಲಿಗೆ ಆಗಮಿಸಲು ತ್ರಿವೇಣಿ ಸೇತುವೆಯ ಮೂಲಕ ಆಗಮಿಸಬೇಕು ಎಂದು ಪೊಲೀಸರು ಸೂಚನೆ ನೀಡಿದ್ದಾರೆ. 

ಇನ್ನು ಶಬರಿಮಲೆಯಲ್ಲಿನ ಕೆಲವು ಪ್ರದೇಶಗಳಿಗೆ ಭಕ್ತರು ಪ್ರವೇಶಿಸದಂತೆ ಎಚ್ಚರಿ ನೀಡಲಾಗಿದೆ. ಮಳೆಯಿಂದ ಹಲವೆಡೆ ಬೆಟ್ಟ ಗುಡ್ಡಗಳು ಕುಸಿಯುವ ಅಪಾಯ ಎದುರಾದ ಹಿನ್ನೆಲೆಯ ಈ ಸೂಚನೆ ನೀಡಲಾಗಿದೆ. 

Follow Us:
Download App:
  • android
  • ios