ರವಿವರ್ಮನ ‘ತಿಲೋತ್ತಮೆ’ ಚಿತ್ರಕಲೆ 5.17 ಕೋಟಿಗೆ ಮಾರಾಟ
ರಾಜಾ ರವಿವರ್ಮನ ಕುಂಚದಲ್ಲಿ ಸೃಷ್ಟಿಯಾದ ‘ತಿಲೋತ್ತಮೆ’ ಚಿತ್ರಕಲೆಯು 5.17 ಕೋಟಿ ರು.ಗೆ ನ್ಯೂಯಾರ್ಕ್ನ ಸೌತ್‌ಬೇಯಲ್ಲಿನ ದಕ್ಷಿಣ ಏಷ್ಯಾದ ಆಧುನಿಕ ಮತ್ತು ಸಮಕಾಲೀನ ಕಲೆಯಲ್ಲಿ ಮಾರಾಟವಾಗಿದ್ದು, 3.90 ಕೋಟಿ.ಗಿಂತ ಹೆಚ್ಚು ರು.ಗೆ ಮಾರಾಟವಾಗಬಹುದೆಂದು ಅಂದಾಜಿಸಲಾಗಿತ್ತು.
ನ್ಯೂಯಾರ್ಕ್: ರಾಜಾ ರವಿವರ್ಮನ ಕುಂಚದಲ್ಲಿ ಸೃಷ್ಟಿಯಾದ ‘ತಿಲೋತ್ತಮೆ’ ಚಿತ್ರಕಲೆಯು 5.17 ಕೋಟಿ ರು.ಗೆ ನ್ಯೂಯಾರ್ಕ್ನ ಸೌತ್‌ಬೇಯಲ್ಲಿನ ದಕ್ಷಿಣ ಏಷ್ಯಾದ ಆಧುನಿಕ ಮತ್ತು ಸಮಕಾಲೀನ ಕಲೆಯಲ್ಲಿ ಮಾರಾಟವಾಗಿದ್ದು, 3.90 ಕೋಟಿ.ಗಿಂತ ಹೆಚ್ಚು ರು.ಗೆ ಮಾರಾಟವಾಗಬಹುದೆಂದು ಅಂದಾಜಿಸಲಾಗಿತ್ತು.
ಹಿಂದು ಪುರಾಣದ ಪ್ರಕಾರ ಸಂದ ಮತ್ತು ಉಪಸಂದ ಎಂಬ ಇಬ್ಬರು ರಕ್ಕಸರನ್ನು ನಾಶ ಮಾಡಲು ಬ್ರಹ್ಮ ‘ತಿಲೋತ್ತಮೆ’ಯನ್ನು ಸೃಷ್ಟಿಸಿದ್ದು, ತಿಲೋತ್ತಮೆಯ ಸೌಂದರ್ಯಕ್ಕೆ ಮನಸೋತ ಆ ಇಬ್ಬರು ರಾಕ್ಷಸರು ಕೊನೆಯಲ್ಲಿ ಕೊಲ್ಲಲ್ಪಟ್ಟರು.
ರವಿ ವರ್ಮ ಈ ಪುರಾಣ ಪ್ರಸಿದ್ಧ ಪಾತ್ರವನ್ನು ತನ್ನ ಕುಂಚದ ಮೂಲಕವೇ ಮನಸೆಳೆಯುವಂತೆ ಮೂಡಿಸಿದ್ದು, ಹರಾಜಿನಲ್ಲಿ ಕೆಲವೇ ನಿಮಿಷಗಳಲ್ಲಿ ಮಾರಾಟವಾಯಿತೆಂದು ವರದಿಯಾಗಿದೆ.