ರೈಲ್ವೆಯಲ್ಲಿ 90,000 ಹುದ್ದೆಗೆ ಅರ್ಜಿ ಅಹ್ವಾನ: ವಿಶ್ವದಲ್ಲೇ ಅತಿ ದೊಡ್ಡ ನೇಮಕಾತಿ!
ಭಾರತೀಯ ರೈಲ್ವೆ ದೇಶಾದ್ಯಂತ ಖಾಲಿ ಇರುವ ವಿವಿಧ ದರ್ಜೆಯ 89,409 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಉದ್ಯೋಗ ನೇಮಕಾತಿ ಪ್ರಕ್ರಿಯೆ ಎಂದು ರೈಲ್ವೆ ಹೇಳಿಕೊಂಡಿದೆ.
ನವದೆಹಲಿ: ಭಾರತೀಯ ರೈಲ್ವೆ ದೇಶಾದ್ಯಂತ ಖಾಲಿ ಇರುವ ವಿವಿಧ ದರ್ಜೆಯ 89,409 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಉದ್ಯೋಗ ನೇಮಕಾತಿ ಪ್ರಕ್ರಿಯೆ ಎಂದು ರೈಲ್ವೆ ಹೇಳಿಕೊಂಡಿದೆ. 18-31ರ ವಯೋಮಿತಿಯ, 19900- 63200 ರು. ವೇತನ ಹೊಂದಿರುವ ವಿವಿಧ ಹುದ್ದೆಗಳಿಗೆ 2018ರ ಮಾ.5ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಲೋಕೋಪೈಲಟ್, ಫಿಟ್ಟರ್, ತಾಂತ್ರಿಕ ಸಿಬ್ಬಂದಿ, ಕಾರ್ಪೆಂಟರ್, ಹೆಲ್ಪರ್, ಗೇಟ್‌ಮೆನ್ ಸೇರಿದಂತೆ ವಿವಿಧ ಹುದ್ದೆಯ ಮಾಹಿತಿಯನ್ನು, ರೈಲ್ವೆ ನೇಮಕಾತಿ ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.