ರಾಹುಲ್ ಗಾಂಧಿ ಮನೆಯಲ್ಲಿ ಚರ್ಚ್ ಇದೆ

ನವದೆಹಲಿ(ಸೆ.29): ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕ್ರೈಸ್ತ ಧರ್ಮದವರಾಗಿದ್ದು, ಅವರ ಅಧಿಕೃತ ನಿವಾಸ 10 ಜನಪಥ್‌ನಲ್ಲಿ ಚರ್ಚ್ ಇದೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ಪ್ರವಾಸದ ವೇಳೆ ದೇವಸ್ಥಾನಗಳಿಗೆ ಭೇಟಿ ನೀಡಿದ ಸಂಬಂಧವಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸ್ವಾಮಿ ಕಿಡಿಕಾರಿದ್ದಾರೆ.

ಈ ಬಗ್ಗೆ ಗುರುವಾರ ಮಾತನಾಡಿದ ಸ್ವಾಮಿ, ‘ರಾಹುಲ್ ಗಾಂಧಿ ಮೊದಲು ತಾನೋರ್ವ ಹಿಂದೂ ಎಂಬುದನ್ನು ನಿರೂಪಿಸಲಿ,’ ಎಂದು ಸವಾಲು ಹಾಕಿದ್ದಾರೆ.