Asianet Suvarna News Asianet Suvarna News

2019 ರ ಪಿಎಂ ಯಾರು?: ಯಾರ ಪ್ಲ್ಯಾನ್ ವರ್ಕೌಟ್ ಆಗತ್ತೆ!

2019ರ ಚುನಾವಣೆಗೆ ಸಿದ್ದವಾದ ಅಖಾಡ

ಅಧಿಕಾರ ಹಿಡಿಯಲು ಪಕ್ಷಗಳ ಪ್ಲ್ಯಾನ್

ಮೋದಿ ಮಣಿಸಲು ಒಂದಾದ ವಿಪಕ್ಷಗಳು

ಪ್ರಧಾನಿ ರೇಸ್‌ನಲ್ಲಿದ್ದಾರೆ ಹಲವು ನಾಯಕರು

ಬೆಂಗಳೂರು(ಜು.29): ಇನ್ನೇನು ಲೋಕಸಭೆ ಚುನಾವಣೆ ಸಮೀಪದಲ್ಲೇ ಇದೆ.  ರಾಷ್ಟ್ರ ರಾಜಕಾರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಕೂಡ ಸಿಗುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳೂ ಕೂಡ ಅಧಿಕಾರದ ಗದ್ದುಗೆ ಹಿಡಿಯಲು ಮಾಸ್ಟರ್ ಪ್ಲ್ಯಾನ್ ಮಾಡುತ್ತಿವೆ.

ಪ್ರಧಾನಿ ನರೇಂದ್ರ ಮೋದಿ ಈ ಬಾರಿಯೂ ಜನರ ಆರ್ಶೀವಾದ ಎದುರು ನೋಡುತ್ತಿದ್ದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ಬಾರಿ ಹೇಗಾದರೂ ಮಾಡಿ ಗದ್ದುಗೆ ಏರಬೇಕೆಂಬ ತವಕದಲ್ಲಿದ್ದಾರೆ.

ಆದರೆ ಚುನಾವಣೆಯನ್ನು ಏಕಾಂಗಿಯಾಗಿ ಗೆಲ್ಲಲು ಸಾಧ್ಯವಿಲ್ಲ ಎಂದು ಅರಿತಿರುವ ಕಾಂಗ್ರೆಸ್, ಹಲವು ಪ್ರಾದೇಶಿಕ ಪಕ್ಷಗಳೊಂದಿಗೆ ಚುನಾವಣಾ ಪೂರ್ವ ಮೈತ್ರಿಗೆ ಮುಂದಾಗಿದೆ. ಆದರೆ ಕಾಂಗ್ರೆಸ್ ಜೊತೆ ಕೈ ಜೋಡಿಸಲಿರುವ ಈ ಪ್ರಾದೇಶಿಕ ಪಕ್ಷಗಳಲ್ಲೇ ಹಲವು ನಾಯಕರು ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ.

ಇದು ಮಹಾಮೈತ್ರಿಗೂ ಮೊದಲೇ ವಿಪಕ್ಷಗಳ ನಡುವಿನ ಬಿರುಕನ್ನು ಎತ್ತಿ ತೋರಿಸಿದೆ.  ನರೇಂದ್ರ ಮೋದಿ ಅವರನ್ನು ಕಟ್ಟಿ ಹಾಕುವ ಏಕೈಕ ಉದ್ದೇಶದಿಂದ ರಚನೆಯಾಗಲಿರುವ ಈ ಮಹಾಮೈತ್ರಿಯಲ್ಲಿ, ಮಮತಾ ಬ್ಯಾನರ್ಜಿ, ಶರದ್ ಪವಾರ್, ಅಖಿಲೇಶ್ ಯಾದವ್, ಹೆಚ್.ಡಿ ದೇವೆಗೌಡ, ಮಾಯಾವತಿ  ಸೇರಿದಂತೆ ಅನೇಕ ಹಿರಿಯ ನಾಯಕರು ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟು ಕೂತಿದ್ದಾರೆ.

ಹಾಗಾದರೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷ ಏನು ಪ್ಲ್ಯಾನ್ ಮಾಡಿಕೊಂಡಿದೆ?. ಅಧಿಕಾರ ಹಿಡಿಯಲು ಬಿಜೆಪಿ, ಕಾಂಗ್ರೆಸ್ ಯೋಜನೆ ಏನು?. ಪ್ರಾದೇಶಿಕ ಪಕ್ಷಗಳು ಯಾವ ಸಮಯದಲ್ಲಿ ಗೂಗ್ಲಿ ಎಸೆಯಲಿದ್ದಾರೆ?. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...  

Video Top Stories