ನವದೆಹಲಿ(ಫೆ.05): ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಭೆ ಅಂದ್ರೆ ಅಲ್ಲಿ ಲಕ್ಷಾಂತರ ಜನ ಸೇರುವುದು ಸಾಮಾನ್ಯ. ಅಪಾರ ಜನಸ್ತೋಮದತ್ತ ಕೈ ಬೀಸುತ್ತಾ ವೇದಿಕೆ ಹತ್ತುವುದು ಮೋದಿ ಅವರ ವಾಡಿಕೆ.

ಆದರೆ ಪ್ರಧಾನಿ ಮೋದಿ ಅವರ ಇತ್ತಿಚೀನ ಕಾಶ್ಮೀರ ಭೇಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಜನರತ್ತ ಮೋದಿ ಕೈ ಬೀಸಿದ್ದಕ್ಕಲ್ಲ, ಬದಲಿಗೆ ಖಾಲಿ ಸರೋವರದಲ್ಲಿ ಮೋದಿ ಕೈ ಬೀಸುತ್ತಾ ದೋಣಿ ವಿಹಾರ ನಡೆಸಿದ್ದು, ನೆಟಿಜನ್ ಗಳಿಂದ ಭಾರೀ ಟ್ರೋಲ್ ಗೆ ಒಳಗಾಗಿದೆ.

ಪ್ರಧಾನಿ ಮೋದಿ ಇತ್ತೀಚಿಗೆ ಜಮ್ಮು ಮತ್ತು ಕಾಶ್ಮೀರದ ದಾಲ್ ಸರೋವರದಲ್ಲಿ ವಿಹಾರ ನಡೆಸಿದ್ದು, ಈ ವೇಳೆ ಸರೋವರದಲ್ಲಿ ಯಾರೂ ಇಲ್ಲದಿದ್ದರೂ ಪ್ರಧಾನಿ ಕೈ ಬಿಸುತ್ತಿರುವ ದೃಶ್ಯವನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ಬಂದ್ ನಡುವೆಯೇ ಬಿಗಿ ಭದ್ರತೆಯೊಂದಿಗೆ ಪ್ರಧಾನಿ ಮೋದಿ ಕಾಶ್ಮೀರಕ್ಕೆ ಭೇಟಿ ನೀಡಿ,  ದಾಲ್​​ ಸರೋವರದಲ್ಲಿ ದೋಣಿ ವಿಹಾರ ನಡೆಸಿದ ವಿಡಿಯೋವನ್ನು ಗುಜರಾತ್ ಬಿಜೆಪಿ ಟ್ವೀಟ್ ಮಾಡಿದೆ. ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಯಾರತ್ತ ಕೈಬಿಸುತ್ತಿದ್ದಾರೆ ಎಂಬುದು ಕಾಣಿಸುತ್ತಿಲ್ಲ.