ಭೋಪಾಲ್‌[ಸೆ.18]: ಧರ್ಮದ ಹೆಸರಿನಲ್ಲಿ ಕೇಸರಿ ವಸ್ತ್ರ ಧರಿಸಿದವರು ಇಂದು ದೇವಾಲಯದ ಒಳಗೂ ಅತ್ಯಾಚಾರ ನಡೆಸುತ್ತಿದ್ದಾರೆ. ಇಂಥವರನ್ನು ದೇವರೂ ಕ್ಷಮಿಸಲ್ಲ ಎಂದು ಹಿರಿಯ ಕಾಂಗ್ರೆಸ್ಸಿಗ ದಿಗ್ವಿಜಯ್‌ ಸಿಂಗ್‌ ಹೇಳಿದ್ದಾರೆ.

ಇಲ್ಲಿ ಸಂತ ಸಮಾಗಮ ಕಾರ್ಯಕ್ರಮದಲ್ಲಿ ಮಾನತಾಡಿದ ಸಿಂಗ್‌, ಸನಾತನ ಧರ್ಮವನ್ನು ಅವಮಾನಿಸುವವರನ್ನು ದೇವರು ಖಂಡಿತಾ ಸುಮ್ಮನೆ ಬಿಡಲ್ಲ. ಕೇಸರಿ ವಸ್ತ್ರ ಧರಿಸಿದವರು ದೇವಾಲಯದೊಳಗೇ ಅತ್ಯಾಚಾರ ನಡೆಸುತ್ತಿದ್ದಾರೆ ಮತ್ತು ಭಸ್ಮಗಳನ್ನು ಮಾರಾಟ ಮಾಡುತ್ತಿದ್ದಾರೆ. ರಾಜಕೀಯ ಹಿತಾಸಕ್ತಿಗಾಗಿ ಕೆಲವರು ಜೈ ಶ್ರೀರಾಮ್‌ ಘೋಷಣೆಯನ್ನು ಬ್ರ್ಯಾಂಡ್‌ ಮಾಡಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿಗೆ ಟಾಂಗ್‌ ನೀಡಿದ್ದಾರೆ.

ಜೈಶ್ರೀರಾಮ್‌ ಎಂದು ಹೇಳುವಾಗ ಸೀತೆಯನ್ನೇಕೆ ಮರೆತಿದ್ದೇವೆ ಎಂದು ಪ್ರಶ್ನಿಸಿದ್ದಾರೆ.