ರಿಚ್ ಮಂಡ್ ರಸ್ತೆಯಲ್ಲಿರುವ  ಬಾಲ್ಡ್ ವಿನ್ ಶಾಲೆಯಲ್ಲಿ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.   ಐಸಿಎಸ್ ಸಿ ಸಿಲಬಸ್ ಪುಸ್ತಕ ಖರೀದಿಯಲ್ಲಿ ಬಾರಿ ಅಕ್ರಮ ನಡೆಸಲಾಗಿದೆ.  3 ಸಾವಿರ ರೂಪಾಯಿ ಪುಸ್ತಕವನ್ನು 10 ಸಾವಿರಕ್ಕೆ ಏರಿಕೆ ಮಾಡಲಾಗಿದೆ.  ಶಾಲಾ ಆಡಳಿತ ಮಂಡಳಿ ಖಾಸಗಿ ಪಬ್ಲಿಷರ್ಸ್ ಜೊತೆ ಒಪ್ಪಂದ ಮಾಡಿಕೊಂಡು ಪುಸ್ತಕ ಬೆಲೆ ಏರಿಸಿದೆ ಎಂದು ಪೋಷಕರು ಪ್ರತಿಭಟನೆ ನಡೆಸಿದ್ದಾರೆ.  

ಬೆಂಗಳೂರು (ಮೇ. 22): ರಿಚ್ ಮಂಡ್ ರಸ್ತೆಯಲ್ಲಿರುವ ಬಾಲ್ಡ್ ವಿನ್ ಶಾಲೆಯಲ್ಲಿ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. 

ಐಸಿಎಸ್ ಸಿ ಸಿಲಬಸ್ ಪುಸ್ತಕ ಖರೀದಿಯಲ್ಲಿ ಬಾರಿ ಅಕ್ರಮ ನಡೆಸಲಾಗಿದೆ. 3 ಸಾವಿರ ರೂಪಾಯಿ ಪುಸ್ತಕವನ್ನು 10 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಶಾಲಾ ಆಡಳಿತ ಮಂಡಳಿ ಖಾಸಗಿ ಪಬ್ಲಿಷರ್ಸ್ ಜೊತೆ ಒಪ್ಪಂದ ಮಾಡಿಕೊಂಡು ಪುಸ್ತಕ ಬೆಲೆ ಏರಿಸಿದೆ ಎಂದು ಪೋಷಕರು ಪ್ರತಿಭಟನೆ ನಡೆಸಿದ್ದಾರೆ. 

ಎಲ್ಲಾ ಕಡೆ ಸಿಗುವ ಪುಸ್ತಕವನ್ನೇ ಶಾಲಾ ಆಡಳಿತ ಮಂಡಳಿ ಬದಲಾಯಿಸಿದೆ. ಪುಸ್ತಕ ಖರೀದಿಗೆ ಖಾಸಗಿ ಹೋಟೆಲ್, ರೆಸಾರ್ಟ್ ಗಳಲ್ಲಿ ಬೌನ್ಸರ್’ಗಳನ್ನಿಟ್ಟು ಪುಸ್ತಕ ಮಾರಾಟ ಮಾಡಲಾಗುತ್ತಿದೆ. ಶಾಲೆಯ ಫೀಸ್, ಟ್ರಾನ್ಸ್ ಪೋರ್ಟ್ , ಯೂನಿಪಾರ್ಮ್’ನಲ್ಲೂ ಯಾವುದೇ ಮಾಹಿತಿ ಕೊಡದೇ 30% ಹೆಚ್ಚಳ ಮಾಡಿದ್ದಾರೆ ಎಂದು ಬಾಲ್ಡ್‌ವಿನ್‌ ಶಾಲಾ ಪ್ರಿನ್ಸಿಪಲ್ ಹಾಗೂ ಆಡಳಿತ ಮಂಡಳಿಯ ವಿರುದ್ದ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.