ಪಾಕ್ ಬಳಿಯಿದೆ ಭಾರತಕ್ಕಿಂತ 10 ಪಟ್ಟು ಅಧಿಕ ಅಣುಬಾಂಬ್!

First Published 20, Jun 2018, 1:30 PM IST
Pakistan developing new types of nuclear weapons
Highlights

ಪಾಕಿಸ್ತಾನದ ಬಳಿ ಭಾರತ ಹೊಂದಿರುವುದಕ್ಕಿಂತಲೂ 10  ಅಧಿಕ ಅಣ್ವಸ್ತ್ರ  ಸಿಡಿತಲೆಗಳು ಅರ್ಥಾತ್ ಅಣುಬಾಂಬ್‌ಗಳು ಇವೆ ಎಂದು ವರದಿಯೊಂದು ತಿಳಿಸಿದೆ. ಪಾಕಿಸ್ತಾನದ ಬಳಿ 140 ರಿಂದ 150 ಅಣ್ವಸ್ತ್ರ ಸಿಡಿತಲೆಗಳು ಇದ್ದರೆ, ಭಾರತದ ಬಳಿ 130 ರಿಂದ 140 ಅಣು ಬಾಂಬ್‌ಗಳು ಇವೆ. 

ನವದೆಹಲಿ (ಜೂ. 20): ಪಾಕಿಸ್ತಾನದ ಬಳಿ ಭಾರತ ಹೊಂದಿರುವುದಕ್ಕಿಂತಲೂ 10 ಅಧಿಕ ಅಣ್ವಸ್ತ್ರ ಸಿಡಿತಲೆಗಳು ಅರ್ಥಾತ್ ಅಣುಬಾಂಬ್‌ಗಳು ಇವೆ ಎಂದು ವರದಿಯೊಂದು ತಿಳಿಸಿದೆ. ಪಾಕಿಸ್ತಾನದ ಬಳಿ 140 ರಿಂದ 150 ಅಣ್ವಸ್ತ್ರ ಸಿಡಿತಲೆಗಳು ಇದ್ದರೆ, ಭಾರತದ ಬಳಿ 130 ರಿಂದ 140 ಅಣು ಬಾಂಬ್‌ಗಳು ಇವೆ.

ಚೀನಾದ ಬಳಿ 280 ಅಣ್ವಸ್ತ್ರ ಸಿಡಿತಲೆ ಇವೆ. ಅಂದರೆ ಭಾರತ ಹೊಂದಿರುವುದಕ್ಕಿಂತಲೂ 2 ಪಟ್ಟು ಅಣ್ವಸ್ತ್ರಗಳನ್ನು ಆ ದೇಶ ಹೊಂದಿದೆ ಎಂದು ಸ್ವೀಡನ್‌ನ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆಯ ವರದಿ ತಿಳಿಸಿದೆ. ಪಾಕಿಸ್ತಾನದ ಬಳಿ ನಮಗಿಂತಲೂ ಅಧಿಕ ಅಣ್ವಸ್ತ್ರ ಸಿಡಿತಲೆಗಳು ಇದ್ದರೂ, ಅವುಗಳ ದಾಳಿ ಎದುರಿಸುವ ಪ್ರಚಂಡ ಶಕ್ತಿ ಭಾರತಕ್ಕಿದೆ ಎಂಬುದು ರಕ್ಷಣಾ ಇಲಾಖೆಯವಾದವಾಗಿದೆ.

ಇನ್ನು, ಅಮೆರಿಕ ಬಳಿ 6450 ಹಾಗೂ ರಷ್ಯಾ ಬಳಿ 6850 ಅಣ್ವಸ್ತ್ರ ಸಿಡಿತಲೆಗಳು ಇವೆ. ವಿಶ್ವದಲ್ಲಿ ೧೪,೪೬೫ರಷ್ಟು ಇಂತಹ ಅಸ್ತ್ರಗಳಿದ್ದು, ಇದರಲ್ಲಿ ಅಮೆರಿಕ, ರಷ್ಯಾದ್ದೇ ಶೇ.92 ರಷ್ಟು ಪಾಲು ಎಂದು ವರದಿ ಹೇಳಿದೆ.

loader