ಪ್ರಕಾಶ್ ರೈ ಗುಲ್ಬರ್ಗಾ ಕ್ಲಬ್ ನಿಂದ ಹೊರಬರುವಾಗ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿ ಮೋದಿ ಮೋದಿ ಘೋಷಣೆ ಕೂಗಿದ್ದಾರೆ. ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಗೆ ಪ್ರಕಾಶ್ ರೈ ಹೆದರಿದ್ದಾರೆ. ಇದಾದ ನಂತರ ಕಲಬುರಗಿಯಲ್ಲಿ ವಾಸ್ತವ್ಯ ಬದಲಿಸಿ ರಾತ್ರಿಯೇ ಹೈದ್ರಾಬಾದ್ ತೆರಳಿದ್ದಾರೆ.
ಬೆಂಗಳೂರು (ಏ. 13): ಪ್ರಕಾಶ್ ರೈ ಗುಲ್ಬರ್ಗಾ ಕ್ಲಬ್ ನಿಂದ ಹೊರಬರುವಾಗ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿ ಮೋದಿ ಮೋದಿ ಘೋಷಣೆ ಕೂಗಿದ್ದಾರೆ. ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಗೆ ಪ್ರಕಾಶ್ ರೈ ಹೆದರಿದ್ದಾರೆ. ಇದಾದ ನಂತರ ಕಲಬುರಗಿಯಲ್ಲಿ ವಾಸ್ತವ್ಯ ಬದಲಿಸಿ ರಾತ್ರಿಯೇ ಹೈದ್ರಾಬಾದ್ ತೆರಳಿದ್ದಾರೆ.
ಪ್ರಕಾಶ ರೈ ಇಂದು ಕಲ್ಬುರ್ಗಿ ವಿವಿಯಲ್ಲಿ ನಡೆಯಬೇಕಿದ್ದ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಭಾಗವಹಿಸಬೇಕಿತ್ತು. ಸಂವಾದವನ್ನು ರದ್ದುಹೊಳಿಸಿದ್ದಾರೆ. ಸಂಜೆ ಕಲಬುರಗಿಯಲ್ಲಿ ನಡೆಯುವ ಅಂಬೇಡ್ಕರ ಜಯಂತಿ ಕಾರ್ಯಕ್ರಮಕ್ಕೆ ಪ್ರಕಾಶ ರೈ ಆಗಮಿಸಬೇಕಾಗಿದೆ. ಸಂಜಾಯಾದ್ರೂ ಬರ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.
ಮೋದಿ ಬಗ್ಗೆ ಅವಹೇಳನಕಾರಿ ಭಾಷಣ ಹಿನ್ನಲೆಯಲ್ಲಿ ನಿನ್ನೆ ರಾತ್ರಿ ಪ್ರಕಾಶ ರೈ ಕಾರಿಗೆ ಮೋದಿ ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ.

Last Updated 14, Apr 2018, 1:13 PM IST