ಚೆನ್ನೈ: ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂಗೆ ಮಂಗಳವಾರ ಹೊಸ ಅಧ್ಯಕ್ಷರ ಆಗಮನವಾಗಿದೆ. ವಿಶೇಷವೆಂದರೆ ಪಕ್ಷಕ್ಕೆ 50 ವರ್ಷಗಳ ಬಳಿಕ ಹೊಸ ಅಧ್ಯಕ್ಷ ರೊಬ್ಬರ ಆಗಮನವಾಗಿದೆ.

ಪಕ್ಷದ ಈ ಹಿಂದಿನ ಅಧ್ಯಕ್ಷ ಕರುಣಾನಿಧಿ ನಿಧನದ ಬಳಿಕ ಈ ಸ್ಥಾನ ತೆರವಾಗಿದ್ದು, ಅದಕ್ಕೆ ಮಂಗಳವಾರ ಸ್ಟಾಲಿನ್ ಆಯ್ಕೆಯಾಗಿದ್ದಾರೆ.

1969  ಜುಲೈ 27ರಂದು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಕರುಣಾನಿಧಿ, ನಿಧನರಾಗುವವರೆಗೂ ಅದೇ ಹುದ್ದೆಯಲ್ಲಿ ಮುಂದುವರೆದಿದ್ದರು.