ಇಂಧೋರ್(ಜು.13): ಮಹಾಭಾರತದಲ್ಲಿ ಪಾಂಡವರು ಪಗಡೆಯಾಟದಲ್ಲಿ ದ್ರೌಪದಿಯನ್ನು ಪಣಕ್ಕಿಟ್ಟು ಸೋತ ಉದಾಹರಣೆ ಎಲ್ಲರಿಗೂ ಗೊತ್ತಿದೆ. ಈಗ ಮಧ್ಯಪ್ರದೇಶದಲ್ಲಿ ಪತಿರಾಯನೊಬ್ಬ ಹೆಂಡತಿಯನ್ನು ಪಣಕ್ಕಿಟ್ಟು ಸೋತ ಘಟನೆ ನಡೆದಿದೆ.

ಗೆದ್ದವರಿಬ್ಬರು ಬಳಿಕ ಗೆಳೆಯನ ಮನಗೆ ನುಗ್ಗಿ ಆತನ ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಪತಿ ಹಾಗೂ ಸ್ನೇಹಿತರು ಜೂಜಿನಲ್ಲಿ ಒಪ್ಪಂದ ಮಾಡಿಕೊಂಡಿದ್ದರು. ತಾನು ಸೋತರೇ ತನ್ನ ಪತ್ನಿಯನ್ನು ನಿಮಗೆ ಬಿಟ್ಟುಕೊಡುತ್ತೇನೆ ಅಂತಾ ಒಪ್ಪಂದ ಮಾಡಿಕೊಂಡಿದ್ದ. ನಂತರ ಜೂಜಾಟದಲ್ಲಿ ಪತಿ ಸೋತಿದ್ದು ಆನಂತರ ಮನೆಗೆ ನುಗ್ಗಿದ ಕಾಮಂಧರು ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರೆ.

ಅಲ್ಲದೆ ಘಟನೆಯ ನಂತರ ತಾನು ಪತಿಯಿಂದ ದೂರ ಉಳಿದಿದ್ದರೂ ನನಗೆ ಮತ್ತೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ಥ ಮಹಿಳೆ ಎಸ್​ಪಿಗೆ ದೂರು ನೀಡಿದ್ದಾಳೆ. ಒಟ್ಟಿನಲ್ಲಿ ಜೂಜಿಗಾಗಿ ಪತ್ನಿಯನ್ನು ಜೂಜಿಗಿಡುವ ಪ್ರಸಂಗ ಪುಸ್ತಕದಲ್ಲಿ ಓದಿದ್ವಿ. ಆದರೆ ಈಗಿನ ಪಿಳಿಗೆಯಲ್ಲೂ ಇಂತಹ ಘಟನೆ ಮರುಕಳಿಸಿರೋದು ವಿಪರ್ಯಾಸ.