Asianet Suvarna News Asianet Suvarna News

ಕಣಿವೆಯಲ್ಲಿ ಉಗ್ರರ ಅಟ್ಟಹಾಸ, ಮೂವರು ಪೊಲೀಸರ ಹತ್ಯೆ

ಕಣಿವೆ ರಾಜ್ಯದಲ್ಲಿ ಉಗ್ರರು ಮತ್ತೆ ಬಾಲ ಬಿಚ್ಚಿದ್ದಾರೆ. ಅಪಹರಣ ಮಾಡಿದ್ದ ಪೊಲೀಸರನ್ನು ಹತ್ಯೆ ಮಾಡಿದ್ದು ಯಾವ ಸಂಘಟನೆಯೂ ಇಲ್ಲಿಯವರೆಗೆ ಹೊನೆ ಹೊತ್ತುಕೊಂಡಿಲ್ಲ.

Kidnapped Jammu And Kashmir Cops Killed By Terrorists
Author
Bengaluru, First Published Sep 21, 2018, 12:37 PM IST
  • Facebook
  • Twitter
  • Whatsapp

ಶ್ರೀನಗರ[ಸೆ.20] ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು ಮೂವರು ಪೊಲೀಸ್ ರನ್ನು ಹತ್ಯೆ ಮಾಡಿದ್ದಾರೆ.

ಶುಕ್ರವಾರ ಮುಂಜಾನೆ ಉಗ್ರರು ಅಪಹರಿಸಿದ್ದ ನಾಲ್ವರು ಪೊಲೀಸರಲ್ಲಿ ಮೂವರನ್ನು ಹತ್ಯೆ ಮಾಡಲಾಗಿದೆ. ಗ್ರಾಮಸ್ಥರ ಸಹಾಯದಿಂದ ಒಬ್ಬರು ಪೊಲೀಸರು ಬದುಕುಳಿದಿದ್ದಾರೆ. ಪೊಲೀಸ್ ಅಧಿಕಾರಿಗಳಾದ ಫಿರ್ದೋಸ್ ಅಹ್ಮದ್ ಕುಚೆ, ಕುಲ್ದೀಪ್ ಸಿಂಗ್ ಮತ್ತು ನಿಸಾರ್ ಅಹ್ಮದ್ ಧೋಬ್ ಹುತಾತ್ಮರಾದ ಪೊಲೀಸರಾಗಿದ್ದಾರೆ.

ಹಿಜ್ಬುಲ್ ಉಗ್ರರು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದ್ದು ಶುಕ್ರವಾರ ಮುಂಜಾನೆ ದಕ್ಷಿಣ ಕಾಶ್ಮೀರದ ಶೋಪಿಯಾನದಿಂದ ನಾಲ್ಕು ಮಂದಿ ಪೊಲೀಸರನ್ನು ಭಯೋತ್ಪಾದಕರು ಅಪಹರಿಸಿದ್ದರು. ಈ ಹಿಂದೆ ಯೋಧ ಔರಂಗಜೇಬ್ ಅವರನ್ನು ಅಪಹರಿಸಿ ಹತ್ಯೆ ಮಾಡಿದ್ದ ಉಗ್ರರು ಕ್ರೌರ್ಯ ಮೆರೆದಿದ್ದರು.

"

Follow Us:
Download App:
  • android
  • ios