Asianet Suvarna News Asianet Suvarna News

ರಾಷ್ಟ್ರಗೀತೆ ಕಡ್ಡಾಯ ಮೂರ್ಖತನದ ನಿರ್ಧಾರ ಎಂದ ನಾರಾಯಣನ್

‘‘ಮನರಂಜನೆಗಾಗಿ ಚಿತ್ರಮಂದಿರಕ್ಕೆ ಬರುವವರಿಗೆ ರಾಷ್ಟ್ರೀಯವಾದವನ್ನು ಹೇರುವುದು ಸರಿಯಲ್ಲ. ಭಾರತವನ್ನು ದೇಶ ಎನ್ನಲಾಗದು. ಅದು ರಾಷ್ಟ್ರೀಯತೆಗಳ ಒಕ್ಕೂಟ. ದೇಶಭಕ್ತಿಯು ಸಹಜವಾಗಿ ಹುಟ್ಟಬೇಕೇ ಹೊರತು ಹೇರುವುದು ಒಳ್ಳೆಯ ಬೆಳವಣಿಗೆಯಲ್ಲ,’’ ಎಂದೂ ನಾರಾಯಣನ್ ಹೇಳಿದ್ದಾರೆ.

India not a nation but federation of nationalities

ನವದೆಹಲಿ(ಡಿ.27): ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಮಾಡಿರುವುದು ಮೂರ್ಖತನದ ನಿರ್ಧಾರ ಎಂದು ಇತಿಹಾಸಕಾರ ಎಂಜಿಎಸ್ ನಾರಾಯಣನ್ ಹೇಳಿದ್ದಾರೆ.

‘‘ಸುಪ್ರೀಂ ಕೋರ್ಟ್‌'ನ ಈ ತೀರ್ಪು ಅವಿವೇಕದಿಂದ ಕೂಡಿದ್ದು, ರಾಷ್ಟ್ರೀಯವಾದವನ್ನು ಹೇರುವಂಥ ಪ್ರಯತ್ನ ಯಾವತ್ತೂ ಸಫಲವಾಗುವುದಿಲ್ಲ. ಇದು ಖಂಡಿತಾ ಸೋಲುತ್ತದೆ,’’ ಎಂದಿದ್ದಾರೆ ಐತಿಹಾಸಿಕ ಸಂಶೋಧನೆಗೆ ಸಂಬಂಧಿಸಿದ ಭಾರತೀಯ ಮಂಡಳಿ(ಐಸಿಎಚ್‌ಆರ್) ಮಾಜಿ ಅಧ್ಯಕ್ಷರೂ ಆಗಿರುವ ನಾರಾಯಣನ್.

‘‘ಮನರಂಜನೆಗಾಗಿ ಚಿತ್ರಮಂದಿರಕ್ಕೆ ಬರುವವರಿಗೆ ರಾಷ್ಟ್ರೀಯವಾದವನ್ನು ಹೇರುವುದು ಸರಿಯಲ್ಲ. ಭಾರತವನ್ನು ದೇಶ ಎನ್ನಲಾಗದು. ಅದು ರಾಷ್ಟ್ರೀಯತೆಗಳ ಒಕ್ಕೂಟ. ದೇಶಭಕ್ತಿಯು ಸಹಜವಾಗಿ ಹುಟ್ಟಬೇಕೇ ಹೊರತು ಹೇರುವುದು ಒಳ್ಳೆಯ ಬೆಳವಣಿಗೆಯಲ್ಲ,’’ ಎಂದೂ ನಾರಾಯಣನ್ ಹೇಳಿದ್ದಾರೆ.

Follow Us:
Download App:
  • android
  • ios