ಲಂಡನ್ (ಜೂ.26) ಪ್ರಪಂಚದಲ್ಲೇ ಭಾರತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ರಾಷ್ಟ್ರವಂತೆ! ಹೌದು ಹೀಗೊಂದು ವರದಿ ಇದೀಗ ಸುದ್ದಿ ಮಾಡುತ್ತಿದೆ.

ಲೈಂಗಿಕ ದೌರ್ಜನ್ಯ, ಗುಲಾಮಗಿರಿ, ಕಾರ್ಮಿಕ ವರ್ಗದ ಮಹಿಳೆಯರನ್ನು ಶೋಷಣೆಗೆ ಗುರಿ ಮಾಡುತ್ತಿರುವುದರಲ್ಲಿಯೂ ಭಾರತಕ್ಕೆ ಬೇಡದ ಸ್ಥಾನ ಸಿಕ್ಕಿದೆ. ಥಾಮನ್ಸ್ ವ್ರೈಟರ್ಸ್ ಸಂಸ್ಥೆ ಮಾಡಿರುವ ಸರ್ವೇ ಈ ಆಘಾತಕಾರಿ ಅಂಶವನ್ನು ಹೊರಹಾಕಿದೆ. ಸದಾ ಯುದ್ಧದಲ್ಲೇ ಮುಳುಗಿರುವ ಅಪಘಾನಿಸ್ಥಾನ ಮತ್ತು ಸಿರಿಯಾ ಎರಡನೇ ಸ್ಥಾನ ಪಡೆದುಕೊಂಡಿವೆ.

550 ಕ್ಕೂ ಅಧಿಕ ತಜ್ಞರು ಮಹಿಳೆಯರಿಗೆ ಸಂಬಂಧಿಸಿದ ವಿಚಾರಗಳನ್ನು ಸಮಸ್ಯೆಗಳನ್ನು ಇಟ್ಟುಕೊಂಡು ಸಮೀಕ್ಷೆ ಮಾಡಿದ್ದವು. ಸೋಮಾಲಿಯಾ ಮತ್ತು ಸೌದಿ ಅರೇಬಿಯಾ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದುಕೊಂಡೊವೆ.

ಯುಎಸ್ ಎ ಕೂಡ ಬೇಡದ ಪಟ್ಟಿಯ ಮೊದಲ ಹತ್ತರಲ್ಲಿ ಸ್ಥಾನ ಪಡೆದುಕೊಂಡಿದೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಹಿಂಸೆ, ಅತ್ಯಾಚಾರ ಮುಂತಾದ ವಿಚಾರಗಳ ಮೇಲೆ ಅಧ್ಯಯನ ನಡೆಸಿದ ಸಂಸ್ಥೆಯ ಸರ್ವೆಯಲ್ಲಿ ಯುಎಸ್ ಎ ಸಹ ಮೂರನೇ ಸ್ಥಾನ ಪಡೆದುಕೊಂಡಿದೆ ಎಂದರೆ ಮಹಿಳೆಯರ ಸ್ಥಿತಿ ಹೇಗಿದೆ ಎಂಬುದನ್ನು ಅರಿತು ಕೊಳ್ಳಬಹುದು.

2007 ರಿಂದ2016ರ ಅವಧಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಮಾಣ ಭಾರತದಲ್ಲಿ ಶೇ.83 ಎಷ್ಟು ಏರಿಕೆಯಾಗಿದೆ. ಭಾರತದಲ್ಲಿ ಪ್ರತಿ ಗಂಟೆಗೆ ನಾಲ್ಕು ಅತ್ಯಾಚಾರ ಪ್ರಕರಣ ದಾಖಲಾಗುತ್ತಿದೆ! ಎಂದು ವರದಿಗಳು ಹೇಳುತ್ತಿವೆ.