Asianet Suvarna News Asianet Suvarna News

ಜಪಾನ್‌ ಜತೆ ಭಾರತ ‘2+2’ ಮಾತುಕತೆ; ಏನಿದರ ಮಹತ್ವ?

ಭಾರತ- ಜಪಾನ್‌ ನಡುವೆ ದ್ವಿಪಕ್ಷೀಯ ಮಾತುಕತೆ | ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್‌ ಪ್ರಧಾನಿ ಶಿಂಜೋ ಅಬೆ  ‘2+2’ ಸಮಾಲೋಚನೆಗೆ ನಿರ್ಧಾರ 

India, Japan agree to hold 2+2 dialogue to enhance securiy
Author
Bengaluru, First Published Oct 30, 2018, 8:51 AM IST
  • Facebook
  • Twitter
  • Whatsapp

ಟೋಕಿಯೋ (ಅ. 30): ಭಾರತ- ಜಪಾನ್‌ ದ್ವಿಪಕ್ಷೀಯ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಒಯ್ಯುವ ಸಲುವಾಗಿ ‘2+2’ ಮಾತುಕತೆ ನಡೆಸಲು ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್‌ ಪ್ರಧಾನಿ ಶಿಂಜೋ ಅಬೆ ಅವರು ಸೋಮವಾರ ನಡೆಸಿದ ದ್ವಿಪಕ್ಷೀಯ ಮಾತುಕತೆ ವೇಳೆ ‘2+2’ ಸಮಾಲೋಚನೆ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಹೈಸ್ಪೀಡ್‌ ರೈಲು ಯೋಜನೆ ಹಾಗೂ ನೌಕಾ ಸಹಕಾರ ಸೇರಿದಂತೆ ಆರು ಒಪ್ಪಂದಗಳಿಗೆ ಇದೇ ಸಂದರ್ಭ ಸಹಿ ಹಾಕಲಾಗಿದೆ.

ಎರಡೂ ದೇಶಗಳ ವಿದೇಶಾಂಗ ಸಚಿವರು, ರಕ್ಷಣಾ ಸಚಿವರ ನಡುವೆ ನಡೆಯುವ ಸಭೆಗೆ ‘2+2’ ಮಾತುಕತೆ ಎಂದು ಕರೆಯಲಾಗುತ್ತದೆ. ಇಂತಹ ಮಾತುಕತೆಯನ್ನು ಅಮೆರಿಕದ ಜತೆ ಕಳೆದ ತಿಂಗಳಷ್ಟೇ ದೆಹಲಿಯಲ್ಲಿ ಭಾರತ ನಡೆಸಿತ್ತು. ಇದೀಗ ಅದನ್ನು ಜಪಾನ್‌ ಜತೆಗೂ ನಡೆಸಲು ನಿರ್ಧರಿಸಿದೆ.

ದ್ವಿಪಕ್ಷೀಯ ಸಂಬಂಧದಲ್ಲಿನ ಬೆಳವಣಿಗೆಗಳು, ಹೊಸ ಯಾವ ಕ್ಷೇತ್ರದಲ್ಲಿ ಸಹಕಾರ ವೃದ್ಧಿಸಬೇಕು ಎಂಬುದರ ಕುರಿತು ಭಾರತ- ಜಪಾನ್‌ ವಾರ್ಷಿಕ 13ನೇ ಶೃಂಗದ ಸಂದರ್ಭದಲ್ಲಿ ಇಬ್ಬರೂ ನಾಯಕರು ಚರ್ಚೆ ನಡೆಸಿದರು. ಮುಂಬೈ- ಅಹಮದಾಬಾದ್‌ ನಡುವೆ ಜಪಾನ್‌ ಸಹಕಾರದಲ್ಲಿ ಅನುಷ್ಠಾನಗೊಳ್ಳುತ್ತಿರುವ ಹೈಸ್ಪೀಡ್‌ ರೈಲು ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದರು. ಜತೆಗೆ ಆ ಯೋಜನೆಗೆ ಜಪಾನ್‌ ಸಾಲ ಪಡೆಯುವ ಕುರಿತು ಒಪ್ಪಂದ ಮಾಡಿಕೊಳ್ಳಲಾಯಿತು. 

Follow Us:
Download App:
  • android
  • ios