Asianet Suvarna News Asianet Suvarna News

'ವಿಜಯೀ ವಿಶ್ವ ತಿರಂಗಾ ಪ್ಯಾರಾ...' ಇಲ್ಲಿ, ಅಲ್ಲಿ ಎಲ್ಲೆಲ್ಲಿಯೂ ತ್ರಿವರ್ಣ ಧ್ವಜ!

ದೇಶಾದ್ಯಂತ ರಾರಾಜಿಸುತ್ತಿದೆ ತ್ರಿವರ್ಣ ಧ್ವಜ! ಕೆಂಪುಕೋಟೆ ಮೇಲೆ ಪ್ರಧಾನಿಯಿಂದ ಧ್ವಜಾರೋಹಣ! ಗಡಿಯಲ್ಲಿ ಸಿಹಿ ಹಮಚಿ ಸಂಭ್ರಮಿಸಿದ ಯೋಧರು! ಭಾರತ-ಬಾಂಗ್ಲಾ ಗಡಿಯಲ್ಲೂ ಸಂಭ್ರಮಾಚರಣೆ!ಪುಟಾಣಿಗಳೊಂದಿಗೆ ಸಂಭ್ರಮಿಸಿದ ಬಿಎಸ್ ಎಫ್ ಯೋಧರು

First Published Aug 15, 2018, 2:52 PM IST | Last Updated Sep 9, 2018, 10:08 PM IST

ಬೆಂಗಳೂರು(ಆ.15): ದೇಶ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ. ನವದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಭಾಷಣ ಮಾಡಿದ್ದಾರೆ. ಅದರಂತೆ ದೇಶದ ಮೂಲೆ ಮೂಲೆಗಳಲ್ಲಿ ತ್ರಿವರ್ಣ ಧ್ವಜ ರಾರಾಜಿಸುತ್ತಿದ್ದು, ಸ್ವಾತಂತ್ರ್ಯ ದಿನಾಚರಣೆ ವಿಶೇಷ ಮೆರುಗು ಪಡೆದಿದೆ.

ಇಷ್ಟೇ ಅಲ್ಲದೇ ಭಾರತ-ಬಾಂಗ್ಲಾ, ಭಾರತ-ಪಾಕ್ ಗಡಿಯಲ್ಲೂ ಯೋಧರು ಪರಸ್ಪರ ಸಿಹಿ ಹಂಚುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಬ್ರಮಿಸಿದರು. ಶ್ರೀನಗರದಲ್ಲಿ ಬಿಎಸ್ ಎಫ್ ಯೋಧರು ಪುಟಾಣಿಗಳೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು.

ಇನ್ನು ಕಾಂಗ್ರೆಸ್ ಕಚೇರಿಯಲ್ಲಿ ರಾಹುಲ್ ಗಾಂಧಿ, ನಾಗ್ಪುರದ ಆರ್‌ಎಸ್‌ಎಸ್‌ ಕಚೇರಿಯಲ್ಲಿ ಮೋಹನ್ ಭಾಗವತ್ ಮತ್ತು ಬಿಜೆಪಿ ಹಿರಿಯ ನೇತಾರ ಎಲ್‌.ಕೆ. ಅಡ್ವಾಣಿ ತಮ್ಮ ಮನೆಯಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ಮೆರುಗು ತಂದರು.