Asianet Suvarna News Asianet Suvarna News

ಲವ್‌ ಫೇಲ್ಯೂರ್‌ ಸರ್‌ : ಐಜಿಪಿ ಅಲೋಕ್ ಕುಮಾರ್ ಬಳಿ ರೌಡಿ ಕಹಾನಿ

ರೌಡಿಗಳ ಪರೇಡ್‌ ವೇಳೆ ಒಬ್ಬಾತ ಎರಡು ಕೈಗಳನ್ನು ಬ್ಲೇಡ್‌ನಿಂದ ಕೊಯ್ದುಕೊಂಡಿದ್ದ. ಇದನ್ನು ನೋಡಿದ ಅಲೋಕ್‌ ಕುಮಾರ್‌, ಏನಾಯ್ತು ಎಂದು ಆತನನ್ನು ಪ್ರಶ್ನಿಸಿದ್ದು ಈ ವೇಳೆ ಆತ ತನ್ನ ಲವ್ ಸ್ಟೋರಿಯನ್ನು ಐಜಿಪಿ ಮುಂದೆ ಹೇಳಿದ್ದಾನೆ. 

IGP Alok Kumar Strictly Warned To Rowdies During Rowdy Parade
Author
Bengaluru, First Published Oct 3, 2018, 8:55 AM IST
  • Facebook
  • Twitter
  • Whatsapp

ಬೆಂಗಳೂರು :  ರೌಡಿಗಳ ಪರೇಡ್‌ ವೇಳೆ ಒಬ್ಬಾತ ಎರಡು ಕೈಗಳನ್ನು ಬ್ಲೇಡ್‌ನಿಂದ ಕೊಯ್ದುಕೊಂಡಿದ್ದ. 

ಇದನ್ನು ನೋಡಿದ ಅಲೋಕ್‌ ಕುಮಾರ್‌, ಏನಾಯ್ತು ಎಂದು ಆತನನ್ನು ಪ್ರಶ್ನಿಸಿದರು. ರೌಡಿಶೀಟರ್‌ ಸರ್‌ ಲವ್‌ ಫೇಲೂರ್‌ ಆಗಿದ್ದಕ್ಕೆ ಕೈ ಕೊಯ್ದುಕೊಂಡೆ ಎಂದ. ಮರು ಪ್ರಶ್ನೆ ಹಾಕಿದ ಅಧಿಕಾರಿ, ಎಷ್ಟನೇ ತರಗತಿ ವ್ಯಾಸಂಗ ಮಾಡಿದ್ದೀಯಾ ಎಂದರು. 

8ನೇ ತರಗತಿ ಎಂದು ರೌಡಿ ಉತ್ತರ ನೀಡಿದ. ಮುಂದೆ ಏಕೆ ಓದಿಲ್ಲ ಎಂದಾಗ ರೌಡಿ ಫೇಲ್‌ ಆದೆ ಸರ್‌ ಎಂದ. ಇಷ್ಟಕ್ಕೆ ಸುಮ್ಮನಾಗದ ಅಲೋಕ್‌, ಫೇಲಾದಾಗ ಏಕೆ ಕೈ ಕೊಯ್ದಕೊಳ್ಳಲಿಲ್ಲ ಎಂದು ಪ್ರಶ್ನಿಸುವ ಮೂಲಕ ರೌಡಿಯನ್ನು ತಬ್ಬಿಬ್ಬಾಗುವಂತೆ ಮಾಡಿದರು.

Follow Us:
Download App:
  • android
  • ios