ತುಮಕೂರು[ಮೇ.08]: ಹಿರಿಯೂರಿನ ಮದುವೆ ಮುಗಿಸಿ ವಾಪಸ್ ಬೆಂಗಳೂರಿಗೆ ವಾಪಸ್ ಮರಳುತ್ತಿದ್ದ ವೇಳೆ ಬೈಕ್ ಅಪಘಾತ ಸಂಭಿಸಿ ಮೂವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಚಿತ್ರದುರ್ಗದ ನಿವಾಸಿಗಳಾದ ಪೃಥ್ವಿರಾಜ್(24), ಹನುಮಂತರಾಯ ಹಾಗೂ ಶಿವಕುಮಾರ್ ಮೂವರು ತಮ್ಮ ಸ್ನೇಹಿತನ ಮದುವೆ ಮುಗಿಸಿ ಒಂದೇ ಬೈಕಿನಲ್ಲಿ ಬೆಂಗಳೂರಿಗೆ ಮರಳುತ್ತಿದ್ದರು. ದುರಾದೃಷ್ವಶಾತ್ ದಾರಿ ಮಧ್ಯೆ ಬೈಕ್ ಅಪಘಾತ ಸಂಭವಿಸಿ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರೂ ಒಂದೇ ಬೈಕಿನಲ್ಲಿ ಬೆಂಗಳೂರಿಗೆ ಮರಳುತ್ತಿದ್ದರೆನ್ನಲಾಗಿದೆ. 

ಪೃಥ್ವಿರಾಜ್ ಮತ್ತು ಶಿವಕುಮಾರ್  ಬಿಕಾಂ ಪದವೀದರರಾಗಿದ್ದರೆ, ಹನುಮಂತರಾಯ ಎಂಬಿಎ ಮುಗಿಸಿ ಸಿಎ ಪ್ರಾಕ್ಟೀಸ್ ಮಾಡುತ್ತಿದ್ದ. ಈ ಮೂವರೂ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.