ಸರ್ಕಾರಿ ಬಂಗಲೆ, ಎಸ್‌ಯುವಿ ಕೇಳಿದ ‘ಸರಳಜೀವಿ’ ಸರ್ಕಾರ್‌!

Former Tripura CM Manik Sarkar asks for govt bungalow and vehicle
Highlights

ಅತ್ಯಂತ ಬಡ ಮುಖ್ಯಮಂತ್ರಿ ಎಂದು ಖ್ಯಾತಿ ಪಡೆದಿದ್ದ ತ್ರಿಪುರಾದ ಮಾಜಿ ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್‌ ಅವರು ತಮಗೊಂದು ಸರ್ಕಾರಿ ಬಂಗಲೆ ಬೇಕು ಹಾಗೂ ಓಡಾಡಲು ಐಷಾರಾಮಿ ಎಸ್‌ಯುವಿ ಕಾರು ಬೇಕು ಎಂದು ಕೇಳಿದ್ದಾರೆ.

ಅಗರ್ತಲಾ: ಅತ್ಯಂತ ಬಡ ಮುಖ್ಯಮಂತ್ರಿ ಎಂದು ಖ್ಯಾತಿ ಪಡೆದಿದ್ದ ತ್ರಿಪುರಾದ ಮಾಜಿ ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್‌ ಅವರು ತಮಗೊಂದು ಸರ್ಕಾರಿ ಬಂಗಲೆ ಬೇಕು ಹಾಗೂ ಓಡಾಡಲು ಐಷಾರಾಮಿ ಎಸ್‌ಯುವಿ ಕಾರು ಬೇಕು ಎಂದು ಕೇಳಿದ್ದಾರೆ. ಅವರ ಈ ನಡೆಗೆ ಟೀಕೆ ವ್ಯಕ್ತವಾಗಿದೆ. ಸರಳ ಮುಖ್ಯಮಂತ್ರಿ ಎನ್ನಿಸಿಕೊಂಡಿದ್ದ ಸರ್ಕಾರ್‌ ಅವರಿಗೆ ಇದೆಲ್ಲ ಏಕೆ ಬೇಕು ಎಂದು ಸಾರ್ವಜನಿಕ ವಲಯಗಳಲ್ಲಿ ಪ್ರಶ್ನೆಗಳು ಕೇಳಿಬಂದಿವೆ.

ಸರ್ಕಾರ್‌ ಅವರು ತಮಗೆ ಅಗರ್ತಲಾದ ಶಿಶುವಿಹಾರ ಶಾಲೆಗೆ ಸಮೀಪ ಕಟ್ಟಲಾಗುತ್ತಿರುವ ಮೂರು ಸರ್ಕಾರಿ ಕ್ವಾರ್ಟರ್ಸ್‌ಗಳ ಪೈಕಿ ಒಂದು ಕ್ವಾರ್ಟರ್ಸ್‌ ತಮಗೆ ಬೇಕೆಂದು ಕೇಳಿದ್ದಾರೆ. ಅಲ್ಲದೆ, ಇನ್ನೋವಾ ಅಥವಾ ಸ್ಕಾರ್ಪಿಯೋ ಕಾರು ಬೇಕು ಎಂದು ಸರ್ಕಾರಕ್ಕೆ ಮಾರ್ಚ್ 26ರಂದು ಪತ್ರ ಬರೆದಿದ್ದಾರೆ. ಸರ್ಕಾರ್‌ಗೆ ಸ್ವಂತ ಮನೆ ಇಲ್ಲ. ಸರ್ಕಾರ್‌ ಅವರು ಸಿಎಂ ಇರುವವರೆಗೆ ಅಧಿಕೃತ ಸಿಎಂ ನಿವಾಸದಲ್ಲಿ ವಾಸಿಸುತ್ತಿದ್ದರು. ಆದರೆ ಸಿಎಂ ಹುದ್ದೆ ಹೋದ ಬಳಿಕ ಸಿಪಿಎಂ ಕಚೇರಿಯಲ್ಲಿದ್ದಾರೆ.

 

loader