ನವದೆಹಲಿ[ಆ.14]: ನ್ಯಾಯಾಧಿಕರಣದ ತೀರ್ಪು ಕರ್ನಾಟಕಕ್ಕೆ ಮಾತ್ರವಲ್ಲ ಗೋವಾಕ್ಕೂ ಸೋಲುಂಟಾಗಿದೆ.  ರಾಜ್ಯಕ್ಕೆ ಪೂರ್ಣ ತೃಪ್ತಿ ನೀಡದಿದ್ದರೂ ಭಾಗಶಃ ತೃಪ್ತಿ ನೀಡುವ ರೀತಿಯಲ್ಲಿ ಆದೇಶ ನೀಡಲಾಗಿದೆ ಎಂದು ರಾಜ್ಯದ ಪರ ವಕೀಲ ಮೋಹನ್ ಕಾತರಕಿ ತಿಳಿಸಿದ್ದಾರೆ.

ತೀರ್ಪಿನಲ್ಲಿ ಗೋವಾ ರಾಜ್ಯಕ್ಕೆ 24 ಟಿಎಂಸಿ ಹಾಗೂ ಮಹಾರಾಷ್ಟ್ರಕ್ಕೆ 1.5 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ.  ಕರ್ನಾಟಕಕ್ಕೆ ದೊರಕಿರುವುದು ಒಟ್ಟು 13.7 ಟಿಎಂಸಿ ಎಂದು ವಕೀಲರು ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: ಮಹದಾಯಿ ತೀರ್ಪು : ರಾಜ್ಯಕ್ಕೆ ಅನ್ಯಾಯ, ಸುಪ್ರೀಂಗೆ ಮೇಲ್ಮನವಿ

ಕರ್ನಾಟಕಕ್ಕೆ ಸಿಕ್ಕಿರುವ ನೀರಿನ ಪಾಲಿನ ವಿವರ

  • ಕುಡಿಯುವ ನೀರಿಗಾಗಿ 4 ಟಿಎಂಸಿ 
  • ಕಳಸಾ-ಬಂಡೂರಿಗೆ 4 ಟಿಎಂಸಿ 
  • ನೀರಾವರಿಗೆ 8 ಟಿಎಂಸಿ 
  • ಕಳಸಾ ವ್ಯಾಪ್ತಿಗೆ 1.12 ಟಿಎಂಸಿ 
  • ಬಂಡೂರಿ ವ್ಯಾಪ್ತಿಗೆ 2.18 ಟಿಎಂಸಿ 
  • ವಿದ್ಯುಚ್ಛಕ್ತಿ ಬಳಕೆಗೆ 8.02 ಟಿಎಂಸಿ 
  • ಮಹದಾಯಿ ವ್ಯಾಪ್ತಿಗೆ 1.5 ಟಿಎಂಸಿ 

ಸಿಎಂ ಭೇಟಿಗೆ ಹೋರಾಟಗಾರರು ಸಜ್ಜು

ಮಹದಾಯಿ ನ್ಯಾಯಾಧಿಕರಣ ತೀರ್ಪು ಹಿನ್ನಲೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರುವ ಕಾರಣ ಮಹದಾಯಿ ಹೋರಟಗಾರರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.  ಬೆಂಗಳೂರಿಗೆ ಸಿಎಂ ಬಂದ ಕೂಡಲೇ ಅವರನ್ನು ಭೇಟಿಯಾಗಿ ಹೋರಾಟದ ರೂಪುರೇಷೆಯನ್ನು ರೂಪಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಓದಿ: ಮಹದಾಯಿ ತೀರ್ಪು ಪ್ರಕಟ: ಕರ್ನಾಟಕಕ್ಕೆ 4 ಟಿಎಂಸಿ ಕುಡಿಯುವ ನೀರು