ನವದೆಹಲಿ[ಆ.14]: ನ್ಯಾಯಾಧಿಕರಣದ ತ್ರಿಸದಸ್ಯ ಪೀಠ ಪ್ರಕಟಿಸಿರುವ ಮಹದಾಯಿ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ರಾಜ್ಯ ಕೇಳಿದ್ದ 36.5 ಟಿಎಂಸಿ ಆದರೆ  ತೀರ್ಪಿನಲ್ಲಿ ಹಂಚಿಕೆಯಾಗಿದ್ದು ಮಾತ್ರ ಕೇವಲ 13.7 ಟಿಎಂಸಿ. ಕುಡಿಯುವ ನೀರಿಗಾಗಿ 7.5 ಟಿಎಂಸಿ ಕೇಳಿದರೆ 4 ಟಿಎಂಸಿ ನೀಡಲಾಗಿದೆ. ಜಲ ವಿದ್ಯುತ್'ಗಾಗಿ 14 ಟಿಎಂಸಿ ಮನವಿ ಸಲ್ಲಿಸಲಾಗಿದ್ದು ನೀಡಿರುವುದು ಮಾತ್ರ 8.2 ಟಿಎಂಸಿ. ಇವೆಲ್ಲ ಹಿನ್ನಲೆಯಲ್ಲಿ ನ್ಯಾಯಾಧಿಕರಣದ ತೀರ್ಪು ತೃಪ್ತಿ ತಂದಿಲ್ಲ. ಸುಪ್ರೀಂ ಕೋರ್ಟ್'ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಮೋಹನ್ ಕಾತರಕಿ ಅವರು ಸುವರ್ಣ ನ್ಯೂಸ್ ಡಾಟ್ ಕಾಂ ಸೋದರ ಮಾಧ್ಯಮ ಸುವರ್ಣ ನ್ಯೂಸ್ ಚಾನಲ್'ಗೆ ತಿಳಿಸಿದ್ದಾರೆ.

ಪ್ರಧಾನಿ ಮಧ್ಯ ಪ್ರವೇಶಕ್ಕೆ ಆಗ್ರಹ
ಪ್ರಧಾನಮಂತ್ರಿಗಳು ಮನಸ್ಸು ಮಾಡಿದರೆ ಯಾವುದೇ ಅನ್ಯಾಯವನ್ನೂ ಸರಿ ಪಡಿಸಬಹುದು. ನಾವು 36 ಟಿಎಂಸಿ ನೀರನ್ನು ಕೇಳಿದ್ದೆವು. ಗೋವಾದವರೂ ಬಳಕೆ ಮಾಡದ, ಕೇವಲ ಸಮುದ್ರ ಸೇರುತ್ತಿದ್ದ ನೀರಿಗೆ ಮನವಿ ಮಾಡಿದ್ದವು. ಈ ತೀರ್ಪು ಒಂದು ರೀತಿಯ ಆಘಾತ ಉಂಟು ಮಾಡಿದೆ. ಬಿಜೆಪಿಯವರು ಚುನಾವಣಾ ಸಂಧರ್ಭದಲ್ಲಿ ರಾಜಕೀಯಕ್ಕಾಗಿ ಮಹದಾಯಿ ವಿಚಾರ ಬಳಸಿಕೊಳ್ಳುತ್ತಾರೆ. ಇಂತಹ ವೇಳೆ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು' ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಓದಿ : ಮಹದಾಯಿ ತೀರ್ಪು ಪ್ರಕಟ: ಕರ್ನಾಟಕಕ್ಕೆ 4 ಟಿಎಂಸಿ ಕುಡಿಯುವ ನೀರು