ಕರ್ನಾಟಕ ಬಂದ್ ಮಾಡುವ ಅಧಿಕಾರ ಕೋರಿ ವಾಟಾಳ್ ಸುಪ್ರಿಂ ಮೊರೆ ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 30, Jul 2018, 4:56 PM IST
Faking news Vatal Nagaraj Appeal To Supreme Court
Highlights

ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಇದೀಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. 

ಬೆಂಗಳೂರು :  ತಮ್ಮ ಅನುಮತಿ ಇಲ್ಲದೇ ಉತ್ತರ ಕರ್ನಾಟಕ ಬಂದ್‌ಗೆ ಕರೆಕೊಟ್ಟಿರುವುದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಯಾರೇ ಬಂದ್ ಕರೆ ನೀಡಬೇಕಿದ್ದರೂ ನನ್ನ ಅನುಮತಿ ಪಡೆಯುವುದು ಕಡ್ಡಾಯ. ನಾನು ಹೇಳಿದಾಗ ಮಾತ್ರ ಬಂದ್ ಮಾಡಬೇಕು, ನನ್ನನ್ನು ಬಂದ್‌ಗಳ ಪಿತಾಮಹ ಎಂದು ಘೋಷಿಸಬೇಕು ಎಂದು ಕೋರಿ ವಾಟಾಳ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. 

ಬಂದ್ ಮಾಡುವ ಸಂಪೂರ್ಣ ಹಕ್ಕು ನನಗೆ ಮಾತ್ರ ಇದೆ. ಹೀಗಾಗಿ ಉತ್ತರ ಕರ್ನಾಟಕ ಬಂದ್ ಅಸಿಂಧುಗೊ ಳಿಸಬೇಕು. ಅಲ್ಲದೇ ಉತ್ತರ ಕರ್ನಾಟಕವನ್ನಷ್ಟೇ ಬಂದ್ ಮಾಡಿದರೆ ಬೆಂಗಳೂರಿನಲ್ಲಿ ಇರುವ ನನ್ನನ್ನು ಮಾಧ್ಯಮ ಗಳು ತೋರಿಸುವುದಿಲ್ಲ ಎಂದು ವಾಟಾಳ್ ವಾದ ಮಂಡಿಸಿರುವ ಸಂಗತಿ ಸುಳ್‌ಸುದ್ದಿಗೆ ಲಭ್ಯವಾಗಿದೆ. 

(ಸುಳ್ಳು ಸುದ್ದಿ )

loader