Asianet Suvarna News Asianet Suvarna News

ರೋಗಿಗಳ ಮಾಹಿತಿ ಕಳವಿಗೆ ಫೇಸ್‌ಬುಕ್ ಯತ್ನ : ಶುರುವಾಯ್ತು ಹೊಸ ವಿವಾದ

ರಾಜಕೀಯ ತಂತ್ರಗಾರಿಕೆ ಹೆಣೆಯುವುದರಲ್ಲಿ ನಿಪುಣವಾಗಿರುವ ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆಗೆ ತನ್ನ ಬಳಕೆದಾರರ ಮಾಹಿತಿಯನ್ನು ಸೋರಿಕೆ ಮಾಡಿದ ವಿವಾದಕ್ಕೆ ಸಿಲುಕಿರುವ ಫೇಸ್'ಬುಕ್‌ನ ಮತ್ತೊಂದು ಅಕ್ರಮ ಬೆಳಕಿಗೆ  ಬಂದಿದೆ.

Facebook Controversy

ನ್ಯೂಯಾರ್ಕ್ (ಏ. 08): ರಾಜಕೀಯ ತಂತ್ರಗಾರಿಕೆ ಹೆಣೆಯುವುದರಲ್ಲಿ ನಿಪುಣವಾಗಿರುವ ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆಗೆ ತನ್ನ ಬಳಕೆದಾರರ ಮಾಹಿತಿಯನ್ನು ಸೋರಿಕೆ ಮಾಡಿದ ವಿವಾದಕ್ಕೆ ಸಿಲುಕಿರುವ ಫೇಸ್'ಬುಕ್‌ನ ಮತ್ತೊಂದು ಅಕ್ರಮ ಬೆಳಕಿಗೆ  ಬಂದಿದೆ.

ರೋಗಿಗಳ ವೈದ್ಯಕೀಯ  ವಿವರಗಳನ್ನು ರಹ ಸ್ಯವಾಗಿ ಪಡೆಯಲು ಈ ಕಂಪನಿ ತೀವ್ರ ರೀತಿಯ ಪ್ರಯತ್ನ  ನಡೆಸಿತ್ತು. ಇದಕ್ಕಾಗಿ ರಹಸ್ಯ ವೈದ್ಯರೊಬ್ಬರನ್ನೂ ನಿಯೋಜನೆ ಮಾಡಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. ಆಸ್ಪತ್ರೆಗಳಿಂದ ರೋಗಿಗಳ ಹೆಸರುರಹಿತ  ಮಾಹಿತಿಯನ್ನು ಪಡೆದು, ಅದರ ವಿವರಗಳನ್ನು ಫೇಸ್‌ಬುಕ್ ಬಳಕೆದಾರರ ಮಾಹಿತಿ ಜತೆ ಕಂಪ್ಯೂಟರ್ ಸಹಾಯದಿಂದ ಹೋಲಿಕೆ ಮಾಡಿ ನೋಡುವುದು ಫೇಸ್‌ಬುಕ್‌ನ ಒಟ್ಟಾರೆ ಉದ್ದೇಶ. ಇಂತಹ  ಮಾಹಿತಿಯಿಂದ ರೋಗಿಗಳಿಗೆ ಆಸ್ಪತ್ರೆಗಳು ಉತ್ತಮ ಚಿಕಿತ್ಸೆ ನೀಡಬಹುದು. ಉದಾಹರಣೆಗೆ, ವೃದ್ಧರೊಬ್ಬರು  ಮನೆಯಲ್ಲಿ ಒಬ್ಬರೇ ಇರುತ್ತಾರೆ, ಅವರ ಸಮೀಪದ  ಬಂಧುಗಳಾಗಲಿ, ಸ್ನೇಹಿತರಾಗಲಿ ಜತೆಯಲ್ಲಿ ಎಂಬ  ಸ್ಥಿತಿ ಇದ್ದಾಗ ಈ ಮಾಹಿತಿ ಬಳಸಿಕೊಂಡು ವೃದ್ಧರಿಗೆ
ನೆರವಾಗಬಹುದು. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ  ವೃದ್ಧರ ಬಳಿಗೆ ನರ್ಸ್‌ವೊಬ್ಬರನ್ನು ವೈದ್ಯರು ಕಳುಹಿಸಲು ಈ ಮಾಹಿತಿಯಿಂದ ಅನುಕೂಲವಾಗುತ್ತದೆ  ಎಂಬುದು ಫೇಸ್‌ಬುಕ್ ವಾದ. ಆದರೆ ಇದರಿಂದ ರೋಗಿಗಳ ಖಾಸಗಿತನಕ್ಕೆ ಧಕ್ಕೆ ಬರುತ್ತದೆ ಎಂಬುದು  ತಜ್ಞರ ಆತಂಕ.

ರೋಗಿಗಳ ಹೆಸರುರಹಿತ ವಿವರ ಸಂಗ್ರಹಿಸುವ  ಸಲುವಾಗಿ ಫೇಸ್‌ಬುಕ್ ಕಂಪನಿ ಕಳೆದ  ವರ್ಷದಿಂದಲೇ ಅಮೆರಿಕದ ಆಸ್ಪತ್ರೆಗಳು ಹಾಗೂ ವೈದ್ಯರ ಜತೆ ಮಾತ ನಾಡಲು ಆರಂಭಿಸಿತ್ತು. ರೋಗಿಗಳ ಆರೋಗ್ಯ ಸಮಸ್ಯೆ ಹಾಗೂ ಅದಕ್ಕೆ ಅವರು ಪಡೆಯುತ್ತಿರುವ ಔಷಧ ಕುರಿತಂತೆ  ಮಾಹಿತಿಯನ್ನು ಪಡೆಯಲು ಯತ್ನಿಸಿದ್ದು ನಿಜ.  ಆದರೆ ಇಂತಹ ವಿವರಗಳಲ್ಲಿ ರೋಗಿಯ ಹೆಸರು  ಇರುತ್ತಿರಲಿಲ್ಲ. ವೈದ್ಯಕೀಯ ಸಂಶೋಧನೆಗೆ ಅನುಕೂಲ ಮಾಡಿಕೊಡಲು ಈ ಯೋಜನೆ  ರೂಪಿಸಲಾಗಿತ್ತು. ಆದರೆ ಅಮೆರಿಕ ಅಧ್ಯಕ್ಷೀಯ  ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ  ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕೇಂಬ್ರಿಜ್  ಅನಾಲಿಟಿಕಾ ಕಂಪನಿಗೆ ಬಳಕೆದಾರರ ವಿವರಗಳನ್ನು  ಹಸ್ತಾಂತರ ಮಾಡಿದ ವಿವಾದ ಭುಗಿಲೆದ್ದ ಬಳಿಕ ಈ  ರೀತಿಯ ಮಾಹಿತಿ ಸಂಗ್ರಹ ಹಾಗೂ ಒಟ್ಟಾರೆ  ಯೋಜನೆಯನ್ನೇ ಫೇಸ್‌ಬುಕ್ ಸ್ಥಗಿತಗೊಳಿಸಿದೆ  ಎಂದು ಫೇಸ್‌ಬುಕ್ ವಕ್ತಾರರು ಹೇಳಿದ್ದಾರೆ.  

Follow Us:
Download App:
  • android
  • ios