ಬೆಂಗಳೂರು, [ಡಿ. 24]:  ಮದ್ದೂರು ತಾಲೂಕಿನ ಜೆಡಿಎಸ್ ಕಾರ್ಯಕರ್ತ ಹತ್ಯೆ ಆರೋಪಿಗಳನ್ನು ಶೂಟೌಟ್ ಮಾಡಿ ಎನ್ನುವ ಕುಮಾರಸ್ವಾಮಿ ಅವರ ಪದ ಬಳಕೆಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಮಾಧ್ಯಮಗಳಿಗೆ ಸ್ಪಷ್ಟೀಕರಣ ಬಿಡುಗಡೆಯಾಗಿದೆ.

​ಮದ್ದೂರಿನಲ್ಲಿ ಇಂದು ಹಾಡುಹಗಲೇ ನಡೆದಿರುವ ಕೊಲೆ ನನಗೆ ತೀವ್ರ ಆಘಾತವಾಗಿದೆ. ಕೊಲೆಯಾದ ಪ್ರಕಾಶ್ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. 

ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಕಾನೂನು ಪ್ರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ .

ಮಂಡ್ಯ JDS​ ಮುಖಂಡನ ಹತ್ಯೆ; ಆರೋಪಿಗಳನ್ನು ಶೂಟೌಟ್​ ಮಾಡಿ ಎಂದ ಸಿಎಂ

 ಈ ಪ್ರಕರಣ ಕುರಿತು ಮಾಹಿತಿ ಪಡೆಯುವ ಸಂದರ್ಭದಲ್ಲಿ ಬಳಸಿದ ಪದ ಭಾವನಾತ್ಮಕ ಪ್ರತಿಕ್ರಿಯೆಯೇ ಹೊರತು, ಆದೇಶವಲ್ಲ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸ್ಪಷ್ಟ ಪಡಿಸಿದರು. 

ಅದು ನಾನು ಸಿಎಂ ಆಗಿ ಆಡಿದ ಮಾತಲ್ಲ. ಭಾವೋದ್ವೇಗದಲ್ಲಿ ನಾನು ಹಾಗೆ ಹೇಳಿದ್ದೇನೆ.  ನಾಳೆ [ಮಂಗಳವಾರ] ಮದ್ದೂರಿಗೆ ತೆರಳುತ್ತಿದ್ದೇನೆ ಎಂದರು.