ಕಾಸ್ಟಿಂಗ್ ಕೌಚ್ ಸಿನಿಮಾ ಕ್ಷೇತ್ರ ಮಾತ್ರವಲ್ಲ ಸಂಸತ್'ನಲ್ಲೂ ಇದೆ : ಮಾಜಿ ಕೇಂದ್ರ ಸಚಿವೆ, ಕಾಂಗ್ರೆಸ್ ನಾಯಕಿ

Casting Couch Everywhere, Parliament Not Immune
Highlights

ಈ ಅವ್ಯವಸ್ಥೆ ಸಿನಿಮಾ ಕ್ಷೇತ್ರ ಮಾತ್ರವಲ್ಲ ಎಲ್ಲ ಕ್ಷೇತ್ರಗಳಲ್ಲೂ ಇದೆ. ಇದಕ್ಕೆ ಸಂಸತ್ತು ಕೂಡ ಹೊರತಾಗಿಲ್ಲ' ಇದರ ವಿರುದ್ಧ ದೇಶದಾದ್ಯಂತ ಪ್ರತಿಯೊಬ್ಬರು ದನಿ ಎತ್ತುವ ಕಾಲ ಈಗ ಕೂಡಿ ಬಂದಿದೆ'

ನವದೆಹಲಿ(ಏ.24): ಇತ್ತೀಚಿಗೆ ಕಾಸ್ಟಿಂಗ್ ಕೌಚ್ ಬಗ್ಗೆ ಎಲ್ಲಡೆ ಚರ್ಚೆಯಾಗುತ್ತಿವೆ. ಈ ಬಗ್ಗೆ ಹೆಚ್ಚು ತುಟಿ ಬಿಚ್ಚಿತ್ತಿರುವುದು ಸಿನಿಮಾ ಮಂದಿ ನಮ್ಮ ಶೃತಿ ಹರಿಹರನ್ ಒಳಗೊಂಡು ಬಾಲಿವುಡ್, ಟಾಲಿವುಡ್ ಮುಂತಾದ ಭಾಷೆಯ ನಾಯಕಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಬಹಿರಂಗವಾಗಿಯೇ ವೇದಿಕೆಗಳಲ್ಲಿ ದನಿಯತ್ತುತ್ತಿದ್ದಾರೆ.
ಕಾಸ್ಟಿಂಗ್ ಕೌಚ್ ಬಗ್ಗೆ ಸ್ವತಃ ಕಾಂಗ್ರೆಸ್'ನ ಹಿರಿಯ ನಾಯಕಿ ರೇಣುಕಾ ಚೌಧರಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ಅವ್ಯವಸ್ಥೆ ಸಿನಿಮಾ ಕ್ಷೇತ್ರ ಮಾತ್ರವಲ್ಲ ಎಲ್ಲ ಕ್ಷೇತ್ರಗಳಲ್ಲೂ ಇದೆ. ಇದಕ್ಕೆ ಸಂಸತ್ತು ಕೂಡ ಹೊರತಾಗಿಲ್ಲ' ಇದರ ವಿರುದ್ಧ ದೇಶದಾದ್ಯಂತ ಪ್ರತಿಯೊಬ್ಬರು ದನಿ ಎತ್ತುವ ಕಾಲ ಈಗ ಕೂಡಿ ಬಂದಿದೆ' ಎಂದು ತಿಳಿಸಿದ್ದಾರೆ.
ರೇಣುಕಾ ಚೌಧರಿ ಅವರು ಮಾಜಿ ಕೇಂದ್ರ ಸಚಿವೆಯಾಗಿದ್ದು ಇತ್ತೀಚಿಗಷ್ಟೆ ರಾಜ್ಯಸಭಾ ಸದಸ್ಯತ್ವದಿಂದ ನಿವೃತ್ತರಾಗಿದ್ದರು. ಬಾಲಿವುಡ್'ನ ನೃತ್ಯ ನಿರ್ದೇಶಕಿ ಸರೋಜಾ ಖಾನ್ ಅವರು ಕೂಡ ಕಾಸ್ಟಿಂಗ್ ಕೌಚ್ ಕೇವಲ ಸಿನಿಮಾ ಕ್ಷೇತ್ರದಲ್ಲಿದೆ ಎಂದು ಏಕೆ ಹೇಳುತ್ತೀರಿ ಇದು ಪ್ರತಿಯೊಂದು ಕ್ಷೇತ್ರದಲ್ಲಿದೆ. ಎಲ್ಲ ಕ್ಷೇತ್ರದಲ್ಲೂ ಮಹಿಳೆಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ' ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು.

loader