Asianet Suvarna News Asianet Suvarna News

ವಾಘಾ ಗಡಿಯಲ್ಲಿ ಮಾರ್ಧನಿಸಿದ ದೇಶಭಕ್ತಿ

ವಾಘಾ.. ಭಾರತ ಹಾಗೂ ಪಾಕಿಸ್ತಾನ ಗಡಿ ಪ್ರದೇಶ. ಇಲ್ಲಿ ನಿತ್ಯ ಉಭಯ ದೇಶಗಳ ನಡುವೆ ಶಾಂತಿ, ಸೌಹಾರ್ದತೆಗಾಗಿ ಧ್ವಜ ವಂದನೆ ಕಾರ್ಯಕ್ರಮ ನಡೆಯುತ್ತದೆ.72ನೇ ಸ್ವಾತಂತ್ರ್ಯ ಸಂಭ್ರಮದ ಪ್ರಯುಕ್ತ ಇಂದು ವಾಘಾದಲ್ಲಿ ಭಾರತ ಅದ್ಧೂರಿಯಾಗಿ ಧ್ವಜ ವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

BSF offers sweets to Pak Rangers at Attari-Wagah on Independence Day
Author
Bengaluru, First Published Aug 15, 2018, 9:33 PM IST

ನವದೆಹಲಿ[ಆ.15]: ಇಂದು ಇಡೀ ದೇಶವೇ ಸ್ವಾತಂತ್ರ್ಯ ಸಂಭ್ರಮದಲ್ಲಿ ತೇಲಿದೆ. ಭಾರತ ಹಾಗೂ ಪಾಕಿಸ್ತಾನ ವಾಘಾ ಗಡಿಯಲ್ಲಿ ನಿತ್ಯ ನಡೆಯುವ ಬೀಟಿಂಗ್ ದಿ ರೀಟ್ರೀಟ್ ಎಲ್ಲರ ಹುಬ್ಬೇರಿಸಿತು. ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾರತೀಯ ಸೈನಿಕರಿಂದ ನಡೆದ ಧ್ವಜ ವಂದನೆ ಕಾರ್ಯಕ್ರಮ ನೆರೆದಿದ್ದವರಲ್ಲಿ ದೇಶಭಕ್ತಿಯ ಕಿಚ್ಚು ಮಾರ್ಧನಿಸಿತು.

ವಾಘಾ.. ಭಾರತ ಹಾಗೂ ಪಾಕಿಸ್ತಾನ ಗಡಿ ಪ್ರದೇಶ. ಇಲ್ಲಿ ನಿತ್ಯ ಉಭಯ ದೇಶಗಳ ನಡುವೆ ಶಾಂತಿ, ಸೌಹಾರ್ದತೆಗಾಗಿ ಧ್ವಜ ವಂದನೆ ಕಾರ್ಯಕ್ರಮ ನಡೆಯುತ್ತದೆ. ಸ್ವಾತಂತ್ರ್ಯ ಸಂಭ್ರಮದ ಪ್ರಯುಕ್ತ ಇಂದು ವಾಘಾದಲ್ಲಿ ಭಾರತ ಅದ್ಧೂರಿಯಾಗಿ ಧ್ವಜ ವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸ್ವಾತಂತ್ರ್ಯತ್ಸವದ ಪ್ರಯುಕ್ತ ಉಭಯ ದೇಶಗಳ ನಡುವೆ ಆಕರ್ಷಕ ಕವಾಯತು ನಡೆಯಿತು. ಪಾಕ್ ಸೈನಿಕರ ಎದುರು ನಮ್ಮ ದೇಶದ ಯೋಧರ ವಂದೇ ಮಾತರಂ, ಭಾರತ ಮಾತಾ ಕಿ ಜೈ ಘೋಷಣೆ ಅಲ್ಲಿ ಸೇರಿದ್ದವರಲ್ಲಿ ದೇಶಭಕ್ತಿ ಮತ್ತಷ್ಟು ಹೆಚ್ಚಿಸಿತು. ಎರಡೂ ದೇಶಗಳ ಸೇನಾಧಿಕಾರಿಗಳು ಶುಭಾಶಯ ಮಿನಿಮಯ ಜೊತೆಗೆ ಸಿಹಿ ಹಂಚಿ ಖುಷಿಪಟ್ಟರು. ಧ್ವಜಾರೋಹಣದಲ್ಲಿ ದೇಶದ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಆಗಮಿಸಿ ಅಭೂತಪೂರ್ವ ಘಟನೆಗೆ ಸಾಕ್ಷಿಯಾದರು.

Follow Us:
Download App:
  • android
  • ios