Asianet Suvarna News Asianet Suvarna News

ಬೆಂಗಳೂರಿಗರೇ ಮುಖಕ್ಕೆ ಮಾಸ್ಕ್ ಧರಿಸಿ ಓಡಾಡಬೇಕಾದೀತು..ಹುಷಾರ್!

ಬೆಂಗಳೂರು ಮತ್ತೊಂದು ಬೇಡವಾದ ದಾಖಲೆಗೆ ಪಾತ್ರವಾಗಿದೆ. ಮಾಲಿನ್ಯದ ಸ್ಥಾನದಲ್ಲಿ ಕಪ್ಪು ಪಟ್ಟಿಗೆ ಒಳಗಾಗುವ ಸೂಚನೆಯೂ ಎದುರಾಗಿದೆ.

Bengaluru worse than Delhi in pollution levels: CPCB Report
Author
Bengaluru, First Published Aug 13, 2018, 10:30 PM IST

ಬೆಂಗಳೂರು[ಆ.13]  ಕಳೆದ ವರ್ಷ ರಾಜಧಾನಿ ದೆಹಲಿಯಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರ ವೇಳೆ ಆಟಗಾರರು ಮುಖಕ್ಕೆ ಮಾಸ್ಕ್ ಧರಿಸಿ ಆಟ ಆಡಿದ್ದರು. ಇದೀಗ ಬೆಂಗಳೂರಿಗೂ ಅಂಥದ್ದೆ ಸ್ಥಿತಿ ಎದುರಾಗುವ ಲಕ್ಷಣ ಗೋಚರವಾಗಿದೆ.ವಾಯು ಮಾಲಿನ್ಯ ಎಂದಾಗ ದೆಹಲಿಯನ್ನು ಬೊಟ್ಟು ಮಾಡುತ್ತಿದ್ದ ನಾವು ಇದೀಗ ನಮ್ಮದೇ ಬೆಂಗಳೂರನ್ನು ಕುಲಗೆಡಿಸಿದ್ದೇವೆ.

ವಾಹನಗಳಿಂದ ಹೊಗೆ ಉತ್ಪತ್ತಿ ಮತ್ತು ರಸ್ತೆ ಧೂಳು ವಿಚಾರದಲ್ಲಿ ರಾಷ್ಟ್ರದ ಟಾಪ್‌ 2 ನಗರವಾಗಿ ಬೆಂಗಳೂರು ಗುರುತಿಸಲ್ಪಟ್ಟಿದ್ದು ಬೇಡದ ದಾಖಲೆ ಹೊತ್ತುಕೊಂಡಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ಬಿಡುಗಡೆ ಮಾಡಿದ ವರದಿ ಪ್ರಕಾರ ವಾಯು ಮಾಲಿನ್ಯ ಪೀಡಿತ ನಗರಗಳ ಪೈಕಿ ಉದ್ಯಾನ ನಗರಿಗೆ 2ನೇ ಸ್ಥಾನ. 

ಪುಣೆ ಮಾಲಿನ್ಯದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದು ದೆಹಲಿಯನ್ನು ಹಿಂದಿಕ್ಕಿರುವ ಬೆಂಗಳೂರು 2ನೇ ಸ್ಥಾನಕ್ಕೇರಿದೆ.  ಬೆಂಗಳೂರು ಹೊರವಲಯದಲ್ಲಿ ಕೈಗಾರಿಕೆ ಚಟುವಟಿಕೆಗಳು ಹೆಚ್ಚಿರುವುದೇ ಪ್ರಮುಖ ಕಾರಣ ೆನ್ನಲಾಗಿದ್ದು ಪೀಣ್ಯ ಪ್ರದೇಶದ ಮಾಲಿನ್ಯದ ಅಪಾಯವನ್ನು ವರ್ಷದ ಹಿಂದೆ ಹೇಳಲಾಗಿತ್ತು.

ಆದರೆ ಈ ವರದಿ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಬೆಂಗಳೂರಿನಲ್ಲಿ ಹೆಚ್ಚಿನ ಮಾಲಿನ್ಯಕಾರಕ ಕೈಗಾರಿಕೆಗಳು ಇಲ್ಲ. ಈ ಅಂಕಿಅಂಶಗಳು ಸರಿಯಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.(ಸಾಂದರ್ಭಿಕ ಚಿತ್ರ]

Follow Us:
Download App:
  • android
  • ios