ಬೆಂಗಳೂರು :  ಪ್ರತಿಷ್ಠಿತವಾದ ಏರ್ ಶೋ ವನ್ನು ಪ್ರತೀ ವರ್ಷದಂತೆ ಈ ಬಾರಿಯೂ ಕೂಡ ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಿದೆ. 

ಅನೇಕ ದಿನಗಳಿಂದ ಲಕ್ನೋ - ಬೆಂಗಳೂರು ಎಂದು ಗೊಂದಲಕ್ಕೆ ಕಾರಣವಾಗಿದ್ದ ಶೋ ಇದೀಗ ಮತ್ತೊಮ್ಮೆ ಬೆಂಗಳೂರಿನಲ್ಲಿಯೇ ನಡೆಯುವುದು ಖಚಿತವಾಗಿದೆ. 

ಏರ್ ಶೋ ವನ್ನು ಬೆಂಗಳೂರಿನಲ್ಲಿ ನಡೆಸಲು ಮಿನಿಸ್ಟರಿ ಆಫ್ ಡಿಫೆನ್ಸ್ ನಿಂದಲೇ ಅಧಿಕೃತ ಮಾಹಿತಿ ಹೊರಬಿದ್ದಿದೆ. 

ಒಟ್ಟು 5 ದಿನಗಳ ಕಾಲ ಏರ್ ಶೋ ನಡೆಯುತ್ತಿದ್ದು 2019 ಫೆಬ್ರವರಿ 20 - 24ರವರೆಗೆ ಶೋ ಹಮ್ಮಿಕೊಳ್ಳಲಾಗುತ್ತಿದೆ. 

ಜಾಗತಿಕ ನಾಯಕರು, ಏರೋಸ್ಪೇಸ್ ಉದ್ಯಮದ ಹೂಡಿಕೆದಾರರು ಈ ಏರ್ ಶೋ ನಲ್ಲಿ ಪಾಲ್ಗೊಳ್ಳಲಿದ್ದಾರೆ. 

ಈ ಏರ್ ಶೋ ನಿಂದ ಕೆಲವೊಂದು ಮಾಹಿತಿ, ಯೋಜನೆ, ಯೋಚನೆಗಳನ್ನು ಹಂಚಿಕೊಳ್ಳಲು ಉತ್ತಮ ಅವಕಾಶವೊಂದು ಒದಗಲಿದೆ. 

ಏರ್ ಶೋ ಬೆಂಗಳೂರಿನಿಂದ ಲಕ್ನೋಗೆ ಶಿಫ್ಟ್ ಆಗಲ್ಲ: ಬಿಎಸ್‌ವೈ