ನವದೆಹಲಿ(ಜ.29): ಗಣರಾಜ್ಯೋತ್ಸವದ ಸಂಭ್ರಮದಲ್ಲಿದ್ದ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ, ಇಂದು ಸೇನಾ ಕವಾಯತು ಬೀಟಿಂಗ್ ರಿಟ್ರಿಟ್ ಮೂಲಕ ತೆರೆ ಎಳೆಯಲಾಯಿತು.

ಗಣರಾಜ್ಯೋತ್ಸವದ ಮೂರು ದಿನಗಳ ಬಳಿಕ ಸೇನಾಪಡೆಗಳು ಮರಳಿ ತಮ್ಮ ತಮ್ಮ ಮೂಲ ಸ್ಥಾನಗಳಿಗೆ ತೆರಳುತ್ತವೆ. ಅದಕ್ಕೂ ಮೊದಲು ಮೂರೂ ಸೇನಾ ಪಡೆಗಳಿಂದ ರಾಷ್ಟ್ರಪತಿಗಳಿಗ ವಂದನೆ ಸಲ್ಲಿಸುವ ಬೀಟಿಂಗ್ ರಿಟ್ರೀಟ್ ನಡೆಸಲಾಗುತ್ತದೆ.

ಅದರಂತೆ ಇಂದು ನವದೆಹಲಿಯ ರಾಜಪಥದಲ್ಲಿ ಸೇನಾ ಪಡೆಗಳಿಂದ ಬೀಟಿಂಗ್ ರಿಟ್ರೀಟ್ ಕವಾಯತು ನಡೆಸಲಾಯಿತು. ಸಮಾರಂಭದಲ್ಲಿ ರಾಷ್ಟ್ರಪರಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಮತ್ತು ಮೂರು ಸೇನಾ ಪಡೆಗಳ ಮುಖ್ಯಸ್ಥರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.