Asianet Suvarna News Asianet Suvarna News

ಗ್ರಾಹಕರೇ ಎಚ್ಚರ.. ಅಪಾಯದಲ್ಲಿ 232 ಬ್ಯಾಂಕಿಂಗ್ ಆ್ಯಪ್’ಗಳು!

  • ಫೋನ್’ನಿಂದ ಬ್ಯಾಂಕಿಂಗ್ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಕದಿಯುತ್ತಿರುವ  ಮಾಲ್’ವೇರ್​
  • ಸುಮಾರು 232 ಬ್ಯಾಂಕಿಂಗ್ ಆ್ಯಪ್’ಗಳಿಗೆ ಈ ಮಾಲ್’ವೇರ್’ನಿಂದ ಅಪಾಯ
Banks warn of new mobile malware 232 banking apps in danger

ಮುಂಬೈ: ಮಾಲ್’ವೇರ್’ವೊಂದು ಗ್ರಾಹಕರ ಮೊಬೈಲ್ ಫೋನ್’ನಿಂದ ಬ್ಯಾಂಕಿಂಗ್ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಕದಿಯುತ್ತಿರುವ ಹಿನ್ನೆಲೆಯಲ್ಲಿ, ಬ್ಯಾಂಕುಗಳು  ಗ್ರಾಹಕರಿಗೆ ಎಚ್ಚರಿಸಲು ಆರಂಭಿಸಿವೆ.

ಫ್ಲ್ಯಾಶ್ ಪ್ಲೇಯರ್ ಸೋಗಿನಲ್ಲಿರುವ ಈ ಮಾಲ್’ವೇರ್, ಬ್ಯಾಂಕಿಂಗ್ ಆ್ಯಪ್’ಗಳಿಂದ ಗ್ರಾಹಕರ ಗೌಪ್ಯ ಮಾಹಿತಿಗಳನ್ನು ಕದಿಯುತ್ತಿದೆಯೆಂದು ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ.

ಸುಮಾರು 232 ಬ್ಯಾಂಕಿಂಗ್ ಆ್ಯಪ್’ಗಳು ಈ ಮಾಲ್’ವೇರ್’ನಿಂದ ಅಪಾಯಕ್ಕೊಳಗಾಗಿದ್ದು, ಭಾರತದ ಬ್ಯಾಂಕ್’ಗಳು  ಅವುಗಳಲ್ಲಿ ಸೇರಿವೆಯೆನ್ನಲಾಗಿದೆ.

ಕ್ವಿಕ್ ಹೀಲ್ ಸೆಕ್ಯೂರಿಟಿ ಲ್ಯಾಬ್ ಈ ಆ್ಯ0ಡ್ರಾಯಿಡ್ ಬ್ಯಾಂಕಿಂಗ್ ಟ್ರೋಜನ್ ಬಗ್ಗೆ ವಿಷಯವನ್ನು ಬಹಿರಂಗಪಡಿಸಿದ್ದು, ಅದನ್ನು Android.banker.A2f8a   ಎಂದು  ಗುರುತಿಸಿದೆ.

ಹೇಗೆ ಕಾರ್ಯಾಚರಿಸುತ್ತದೆ:

ಈ ಮಾಲ್’ವೇರ್’ಗಳು ಪ್ಹಿಸಿಂಗ್ (ವಂಚಕ) ವೆಬ್’’ಸೈಟ್’ಗಳ ಮಾದರಿಯಲ್ಲಿ ಕಾರ್ಯಾಚರಿಸುತ್ತವೆ. ಅವುಗಳು ಹಿನ್ನೆಲೆಯಲ್ಲಿ ಕೆಲಸ ಮಾಡುತ್ತವೆ ಹಾಗೂ  ಅಸಲಿ ಬ್ಯಾಂಕಿಂಗ್ ಸಂದೇಶಗಳನ್ನೇ ಹೋಲುವ ನಕಲಿ ನೋಟಿಫಿಕೇಶನ್, ಸಂದೇಶಗಳನ್ನು ಕಳುಹಿಸುತ್ತವೆ.

ಗ್ರಾಹಕರು ಅವುಗಳನ್ನು ತೆರೆದಾಗ ನಕಲಿ ಲಾಗಿನ್ ಸ್ಕ್ರೀನ್’ಗೆ ಕೊಂಡೊಯ್ಯುತ್ತದೆ. ಆ ಮೂಲಕ ಗ್ರಾಹಕರ ಬ್ಯಾಂಕಿಂಗ್ ಸಂಬಂಧಿಸಿದ ಗೌಪ್ಯ ಮಾಹಿತಿಗಳನ್ನು ಕದಿಯುತ್ತದೆ. ವಿಶೇಷವೆಂದರೆ, ಅವು ಬ್ಯಾಂಕಿನಿಂದ ಬರುವ ಸಂದೇಶಗಳಲ್ಲೂ ಕೂಡಾ ಹಸ್ತಕ್ಷೇಪ ಮಾಡಿ, OTPಯನ್ನು ಕೂಡಾ ಕದಿಯುತ್ತದೆ.

ಆದುದರಿಂದ ನೆಟ್ ಬ್ಯಾಂಕಿಂಗ್,  ಆ್ಯಪ್ ಮೂಲಕ ಬ್ಯಾಂಕು ವ್ಯವಹಾರಗಳು ಮಾಡುವವರು ಜಾಗೃತೆಯಿಂದ, ಸರಿಯಾದ ರೀತಿಯಲ್ಲೇ ವ್ಯವಹರಿಸುವಂತೆ ಬ್ಯಾಂಕುಗಳು ಎಚ್ಚರಿಸಿವೆ.

ಗ್ರಾಹಕರು ಯಾವುದೇ ಕಾರಣಕ್ಕೂ ‘ಜೈಲ್-ಬ್ರೋಕನ್’ (ಸಾಫ್ಟ್’ವೇರ್’ನಲ್ಲಿ ಹಸ್ತಕ್ಷೇಪ ಮಾಡಲ್ಪಟ್ಟ) ಮೊಬೈಲ್ ಫೋನ್’ಗಳನ್ನು ಬ್ಯಾಂಕಿಂಗ್ ವ್ಯವಹಾರಗಳಿಗೆ ಬಳಸಬಾರದು. ಆ್ಯಪಲ್’ನ ಅಧಿಕೃತ ಪ್ಲೇಸ್ಟೋರ್’ನಲ್ಲಿರದ ಆ್ಯಪ್’ಗಳನ್ನು ಪಡೆಯಲು ವಾಮಮಾರ್ಗಗಳನ್ನು ಬಳಸಿದ ಐ-ಫೋನ್’ಗಳು ಕೂಡಾ ’ಜೈಲ್’ ಬ್ರೋಕನ್’ ಮೊಬೈಲ್’ಗಳೇ ಆಗಿರುವುದು.

ಅದೇ ತರಹ ರೂಟೆಡ್ ಪೋನ್ ( ಆಪರೇಟಿಂಗ್ ಸಿಸ್ಟಮ್ ಬದಲಾಯಿಸಲ್ಪಟ್ಟ ಆ್ಯ0ಡ್ರಾಯಿಡ್ ಫೋನ್’ಗಳು)  ’ಗಳನ್ನು ಕೂಡಾ ಬ್ಯಾಂಕಿಂಗ್ ವ್ಯವಹಾರಗಳಿಗೆ ಬಳಸಬಾರದು ಎಂದು ತಜ್ಞರು ಹೇಳುತ್ತಾರೆ.

 

Follow Us:
Download App:
  • android
  • ios