1) ಏನ್ರೀ ಅದು ಗಲಾಟೆ: ಶಾ ಕೈಯಲ್ಲಿರುವ ವರದಿಯಲ್ಲಿದೆ ಚಕ್ರವರ್ತಿ, ಗೌಡರ ಭರಾಟೆ!

 ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಯುವ ಬ್ರಿಗೇಡ್ ಸಂಸ್ಥಾಪಕ, ಚಿಂತಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ಡಿವಿ ಸದಾನಂದಗೌಡ ನಡುವೆ ನಡೆದಿದ್ದ ಟ್ವೀಟ್ ಸಮರ ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಗಮನಕ್ಕೆ ಬಂದಿದೆ. ನಾಯಕರ ನಡುವಿನ ಜಗಳದ ವರದಿ ತರಿಸಿಕೊಂಡಿರುವ ಅಮಿತ್ ಶಾ, ಶೀಘ್ರದಲ್ಲೇ ಮಹತ್ವದ ಸೂಚನೆ ಹೊರಬೀಳಲಿದೆ.

2) ಬೊಕ್ಕಸದಲ್ಲಿ ಹಣ ಇಲ್ಲ - ಸಿಎಂ, ಹಣ ಇದೆ - ಆರ್ ಅಶೋಕ್!

ರಾಜ್ಯ ಸರ್ಕಾರದಲ್ಲಿ ಹಣವಿದೆ. ಆದರೆ  ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದು ಸಿಎಂ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. 


3) ಭಾರತ-ಪಾಕ್‌ ಯುದ್ಧ ಆದರೆ 12 ಕೋಟಿ ಸಾವು!


ಕಾಶ್ಮೀರ ವಿಷಯವಾಗಿ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಈಗಾಗಲೇ ನಾಲ್ಕು ಬಾರಿ ಯುದ್ಧ ಸಂಭವಿಸಿದೆ. ವಿಶೇಷ ಸ್ಥಾನಮಾನ ರದ್ದು ಸಂಬಂಧ ತಿಕ್ಕಾಟಕ್ಕಿಳಿದಿರುವ ಎರಡೂ ದೇಶಗಳ ನಡುವೆ ಈ ಬಾರಿ ಅಣ್ವಸ್ತ್ರ ಯುದ್ಧವೇನಾದರೂ ನಡೆದರೆ ಸಮರ ಆರಂಭವಾದ ಒಂದೇ ವಾರದೊಳಗೆ 5ರಿಂದ 12.5 ಕೋಟಿ ಮಂದಿ ಬಲಿಯಾಗಲಿದ್ದಾರೆ. ಇದು 2ನೇ ಮಹಾಯುದ್ಧದಲ್ಲಿ ಬಲಿಯಾದ ಜನರಿಗಿಂತಲೂ ಅಧಿಕ. 

4) Fact check: ಈ ಮಹಿಳೆ ಜೊತೆ ಗಾಂಧೀಜಿ ಏನು ಮಾಡುತ್ತಿದ್ದಾರೆ?

ಗಾಂಧೀಜಿ 150 ನೇ ಜಯಂತಿ ಬೆನ್ನಲ್ಲೇ ಮಹಾತ್ಮ ಗಾಂಧಿ ಮಹಿಳೆಯೊಬ್ಬರೊಟ್ಟಿಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಂಜಯ್ ಗುಪ್ತಾ ಎಂಬ ಹೆಸರಿನ ಟ್ವೀಟರ್ ಖಾತೆಯಲ್ಲಿ ಇದನ್ನು ಪೋಸ್ಟ್ ಮಾಡಿ, ‘ಚಮಚಾಗಳೇ...ನಿಮ್ಮ ರಾಷ್ಟ್ರಪಿತ ಮಾಡುತ್ತಿರುವುದೇನು?’ ಎಂದು ಒಕ್ಕಣೆ ಬರೆಯಲಾಗಿದೆ. ಹಲವಾರು ಜನರು ಸೋಷಿಯಲ್ ಮೀಡಿಯಾಗಳಲ್ಲಿ ಈ ಫೋಟೋವನ್ನು ಶೇರ್ ಮಾಡಿದ್ದಾರೆ.

5) ರ‍್ಯಾಂಕಿಂಗ್‌ನಲ್ಲಿ ಕೊಹ್ಲಿ ಹಿಂದಿಕ್ಕಿ ಕ್ಷಮೆ ಕೇಳಿದ ನೆದರ್ಲೆಂಡ್ ಕ್ರಿಕೆಟಿಗ!

ಐಸಿಸಿ ಏಕದಿನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ ನಿಜ. ಆದರೆ  ಒಂದು ವಿಭಾಗದಲ್ಲಿ ನೆದರ್ಲೆಂಡ್ ಕ್ರಿಕೆಟಿಗ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಈ ಸಾಧನೆ ಮಾಡಿದ ನೆದರ್ಲೆಂಡ್ ಕ್ರಿಕೆಟಿಗ ಕೊಹ್ಲಿ ಹಾಗೂ ಇತರ ಕ್ರಿಕೆಟಿಗರಲ್ಲಿ ಕ್ಷಮೆ ಕೇಳಿದ್ದಾರೆ.

6) ನಟಿಗೆ ಮೋಸ ಮಾಡಿ ‘ಗೀತಾ’ ಹಿಟ್ ಆಯ್ತಾ? ಶಾನ್ವಿ ಬರೆದ್ರು ಅಸಮಾಧಾನ ಪತ್ರ!

ಶಾನ್ವಿ ಶ್ರೀವಾಸ್ತವ್, ಗೋಲ್ಟನ್ ಗಣಿ ಜೊತೆ ಮಾಡಿರುವ ‘ಗೀತಾ’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಗೀತಾ ಯಶಸ್ಸಿನ ಖುಷಿಯಲ್ಲಿದ್ದಾರೆ ಮಾಸ್ಟರ್ ಪೀಸ್ ಚೆಲುವೆ. ಕನ್ನಡ ಸಿನಿಮಾ ಬಗ್ಗೆ ದಿಢೀರನೇ ಪೋಸ್ಟೊಂದನ್ನು ಹಾಕಿದ್ದು ಕುತೂಹಲಕ್ಕೆ ಕಾರಣವಾಗಿದೆ.  

7) ‘ಜೊತೆ ಜೊತೆಯಲಿ’ ಅನಿರುದ್ಧ್ ಒಂದು ದಿನದ ಸಂಭಾವನೆ ಇಷ್ಟೊಂದಾ?

‘ದಿ ಮೋಸ್ಟ್‌ ಅಟ್ರ್ಯಾಕ್ಟಿವ್ ಲುಕ್‌’ ಎಂದೇ ಖ್ಯಾತಿ ಪಡೆದಿರುವ ಅನಿರುದ್ಧ್ ಗೆ ಸಿನಿಮಾದಲ್ಲಿ ನಟಿಸಲು ಅವಕಾಶಗಳು ಹರಿದು ಬರುತ್ತಿದೆ. ಆದರೆ ಕಾಲ್ ಶೀಟ್ ಫ್ರೀ ಇಲ್ಲದಷ್ಟು ತಮ್ಮ ಪಾತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಆರ್ಯವರ್ಧನ್‌ ಗೆ ಬಹುತೇಕ ಹೆಣ್ಣು ಮನಸ್ಸುಗಳು ಸೋತಿವೆ. ಸಿನಿಮಾದಿಂದ ಕಿರುತೆರೆಗೆ ಹಾರಿರುವ ಅನಿರುದ್ಧ್ ದಿನದ ಸಂಭಾವನೆ ಕೇಳಿದರೆ ಅಚ್ಚರಿಯಾಗುತ್ತೆ. 

8) ‘ಸಿಂಧನೂರಲ್ಲಿ ಪ್ಲಾಸ್ಟಿಕ್‌ ಬಳಸಿದರೆ 1 ಲಕ್ಷದವರೆಗೆ ದಂಡ’

ಸಿಂಧನೂರಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣವಾಗಿ ನಿಷೇದಿಸಲಾಗಿದೆ. ಯಾವುದೇ ಅಂಗಡಿ, ಬಾರ್‌ ರೆಸ್ಟೋರೆಂಟ್‌, ಯಾವುದೇ ವಾಣಿಜ್ಯ ಮಳಿಗೆಗಳಲ್ಲಿ ಪ್ಲಾಸ್ಟಿಕ್‌ ಮಾರಾಟ ಮಾಡುವಂತಿಲ್ಲ. ಮಾರಾಟ ಹಾಗೂ ಬಳಕೆ ಕಂಡು ಬಂದರೆ ಅಂತವರ ವಿರುದ್ದ 1 ಸಾವಿರ ರೂ.ಗಳಿಂದ 1 ಲಕ್ಷ ರೂ.ಗಳವರೆಗೂ ದಂಡ ವಿಧಿಸಲಾಗುತ್ತಿದೆ.

9) RBIಗೆ ಪುಣ್ಯ ಬರಲಿ: ಚಿನ್ನ, ಬೆಳ್ಳಿ ದರ ಇಳಿದಿದ್ದು ನಿಮಗೆ ಗೊತ್ತಿರಲಿ!

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಂದೂ ಕೂಡ ಕೊಂಚ ಇಳಿಕೆ ಕಂಡು ಬಂದಿದೆ. ಪ್ರಮುಖವಾಗಿ ಆರ್‌ಬಿಐ ತನ್ನ ರೆಪೋ ದರವನ್ನು ಇಳಿಸಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಲು ಕಾರಣ ಎನ್ನಲಾಗಿದೆ.


10) ಬೊಕ್ಕಸ ಖಾಲಿ: ರಾಜೀನಾಮೆ ನೀಡಲು ಬಿಎಸ್‌ವೈಗೆ ಒತ್ತಾಯ!

ರಾಜ್ಯ ಬೊಕ್ಕಸ ಖಾಲಿಯಾಗಿದೆ, ನೆರೆ ಪರಿಹಾರಕ್ಕೆ ದುಡ್ಡಿಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿರುವ ಬೆನ್ನಲ್ಲಿ ಪ್ರತಿಪಕ್ಷಗಳು ವಾಗ್ದಾಳಿ ಆರಂಭಿಸಿವೆ. ನಿಮ್ಮ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಒಪ್ಪಿಕೊಂಡ ನಂತರ ಒಂದು ಕ್ಷಣ ಕೂಡಾ ಅಧಿಕಾರದಲ್ಲಿ ಮುಂದುವರಿಯುವ ಅರ್ಹತೆ ನಿಮಗಿಲ್ಲ. ದಯವಿಟ್ಟು ರಾಜೀನಾಮೆ ಕೊಟ್ಟು ಹೊರಟುಬಿಡಿ. ನಿಮ್ಮ ಅಸಾಮರ್ಥ್ಯಕ್ಕಾಗಿ ರಾಜ್ಯದ ಜನರನ್ನು ಶಿಕ್ಷಿಸಬೇಡಿ, ಎಂದು ಸಿದ್ದರಾಮಯ್ಯ ಹೇಳಿದರು.