ಭರ್ಜರಿ ಫಾರ್ಮ್​ ನಲ್ಲೇ ಚುನಾವಣೆ ಫೇಸ್ ಮಾಡೋಕೆ ಕಾಂಗ್ರೆಸ್ ರೆಡಿಯಾಗಿದೆ. ವೀರಪ್ಪ ಮೊಯಿಲಿ ನೇತೃತ್ವದಲ್ಲಿ ಪ್ರಣಾಳಿಕೆ ರಚನಾ ಸಮತಿ ರಚನೆಯಾಗಿದೆ. ಕೆಪಿಸಿಸಿ ಕಾರ್ಯಕಾರಿಣಿ ಸಮಿತಿಯನ್ನು ಪುನರಚಿಸಿದ್ದು, ಹದಿನೈದು ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಿ ಹೈಕಮಾಂಡ್ ಆದೇಶ ಹೊರಡಿಸಿದೆ.

ಬೆಂಗಳೂರು (ಅ.16): ಭರ್ಜರಿ ಫಾರ್ಮ್​ ನಲ್ಲೇ ಚುನಾವಣೆ ಫೇಸ್ ಮಾಡೋಕೆ ಕಾಂಗ್ರೆಸ್ ರೆಡಿಯಾಗಿದೆ. ವೀರಪ್ಪ ಮೊಯಿಲಿ ನೇತೃತ್ವದಲ್ಲಿ ಪ್ರಣಾಳಿಕೆ ರಚನಾ ಸಮತಿ ರಚನೆಯಾಗಿದೆ. ಕೆಪಿಸಿಸಿ ಕಾರ್ಯಕಾರಿಣಿ ಸಮಿತಿಯನ್ನು ಪುನರಚಿಸಿದ್ದು, ಹದಿನೈದು ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಿ ಹೈಕಮಾಂಡ್ ಆದೇಶ ಹೊರಡಿಸಿದೆ.

ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಭಾರೀ ತಯಾರಿ ನಡೆಸಿದೆ. ಒಂದೆಡೆ ಪಕ್ಷ ಸಂಘಟನೆಗೆ ಮನೆ ಮನೆಗೆ ಕಾಂಗ್ರೆಸ್, ಮತ್ತೊಂದೆಡೆ ವಿವಿಧ ಸಮಿತಿಗಳಿಗೆ ಸಮರ್ಥ ನಾಯಕರನ್ನ ನೇಮಿಸೋ ಮೂಲಕ ಪಕ್ಷವನ್ನ ಚುನಾವಣೆಗೆ ಸರ್ವ ಸನ್ನದ್ಧಗೊಳಿಸುತ್ತಿದೆ. ಕಳೆದ ಬಾರಿ ಪ್ರಣಾಳಿಕೆ ರಚನೆಗೆ ಒತ್ತು ನೀಡಿ ಕ್ಲಿಕ್ ಆಗಿದ್ದ ಕಾಂಗ್ರೆಸ್ ಈ ಬಾರಿಯೂ ಉತ್ತಮ ಪ್ರಣಾಳಿಕೆ ಬಿಡುಗಡೆ ಮಾಡುವತ್ತ ಚಿತ್ತ ಹರಿಸಿದ್ದು, ಪ್ರಣಾಳಿಕೆ ರಚನೆಗೆ ಸಮಿತಿಯನ್ನು ರಚಿಸಿದೆ. ಮಾಜಿ ಸಿಎಂ ವೀರಪ್ಪ ಮೊಯಿಲಿ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು, ಉಪಾಧ್ಯಕ್ಷರಾಗಿ ಬಿ ಎಲ್ ಶಂಕರರನ್ನು ನೇಮಿಸಿದೆ. ಸಮಿತಿಯಲ್ಲಿ ಎಸ್ ಆರ್ ಪಾಟೀಲ್, ಕಾಗೋಡು ತಿಮ್ಮಪ್ಪ, ಹೆಚ್ ಕೆ ಪಾಟೀಲ್, ಎಂ ಬಿ ಪಾಟೀಲ್, ಹೆಚ್ ಸಿ ಮಹದೇವಪ್ಪ, ಯು ಟಿ ಖಾದರ್ , ರಮೇಶಕುಮಾರ್ ಸೇರಿ ಹಿರಿಯ ಸಚಿವರು,ಶಾಸಕರು,ಮುಖಂಡರು ಸೇರಿ 33 ಮಂದಿಯನ್ನು ಸಮಿತಿಗೆ ನೇಮಿಸಿ ಹೈಕಮಾಂಡ್ ಪಟ್ಟಿ ಬಿಡುಗಡೆ ಮಾಡಿದೆ.

ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೀರಿರುವ ಮಾಜಿ ಸಂಸದೆ ರಮ್ಯಳಿಗೆ ಮತ್ತೊಂದು ಪಕ್ಷದಲ್ಲಿ ಸ್ಥಾನ ಲಭಿಸಿದೆ. ಈಗಾಗಲೇ ಎಐಸಿಸಿ ಐಟಿ ಘಟಕದ ಮುಖ್ಯಸ್ಥೆಯಾಗಿರುವ ರಮ್ಯ, ಇದೀಗ ಕೆಪಿಸಿಸಿ ಕಾರ್ಯಕಾರಿಣಿ ಸಮಿತಿಯಲ್ಲೂ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಇತ್ತೀಚಿಗೆ ಬಿಎಸ್​ವೈ ಆಪ್ತ ಧನಂಜಯಕುಮಾರ್​, ಜಯಮಾಲ, ಅಭಯಚಂದ್ರ ಜೈನ್, ಆರ್ ಬಿ ತಿಮ್ಮಾಪುರ್, ಕೆ ಎನ್ ರಾಜಣ್ಣ, ವಿ ಎಸ್ ಉಗ್ರಪ್ಪ ಸೇರಿದಂತೆ ಒಟ್ಟು 94 ಜನರನ್ನು ಕಾರ್ಯಕಾರಿಣಿ ಸದಸ್ಯರನ್ನಾಗಿ ಹೈಕಮಾಂಡ್ ನೇಮಿಸಿದೆ.