ರಾಜ್ಯದಲ್ಲೂ ಇನ್ನುಮುಂದೆ ಈ ಎಲ್ಲಾ ಸೇವೆಗಳಿಗೆ ಆಧಾರ್ ಕಡ್ಡಾಯ

Aadhaar Mandatory For State Govt Services
Highlights

ಕೇಂದ್ರ ಸರ್ಕಾರದ ನಂತರ ಇದೀಗ ರಾಜ್ಯ ಸರ್ಕಾರ ಕೂಡ ತನ್ನ ವಿವಿಧ ರೀತಿಯ ಸಬ್ಸಿಡಿ, ಮತ್ತಿತರ ಹಣಕಾಸು ನೆರವಿನ ಯೋಜನೆಗಳು ಹಾಗೂ ಸೇವೆಗಳಿಗೆ ಶೀಘ್ರ ಆಧಾರ್ ಕಡ್ಡಾಯವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಕರ್ನಾಟಕ ಆಧಾರ್ (ಹಣಕಾಸು ಮತ್ತು ಇತರೆ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ಉದ್ದೇಶಿತ ವಿತರಣೆ) ವಿಧೇಯಕ, 2018’ ಅನ್ನು ಮಂಡಿಸಿದರು.

ಬೆಂಗಳೂರು : ಕೇಂದ್ರ ಸರ್ಕಾರದ ನಂತರ ಇದೀಗ ರಾಜ್ಯ ಸರ್ಕಾರ ಕೂಡ ತನ್ನ ವಿವಿಧ ರೀತಿಯ ಸಬ್ಸಿಡಿ, ಮತ್ತಿತರ ಹಣಕಾಸು ನೆರವಿನ ಯೋಜನೆಗಳು ಹಾಗೂ ಸೇವೆಗಳಿಗೆ ಶೀಘ್ರ ಆಧಾರ್ ಕಡ್ಡಾಯವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಕರ್ನಾಟಕ ಆಧಾರ್ (ಹಣಕಾಸು ಮತ್ತು ಇತರೆ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ಉದ್ದೇಶಿತ ವಿತರಣೆ) ವಿಧೇಯಕ, 2018’ ಅನ್ನು ಮಂಡಿಸಿದರು.

ರಾಜ್ಯ ಸರ್ಕಾರದ ಅಥವಾ ಅದರ ಏಜೆನ್ಸಿಗಳ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವಿವಿಧ ರೀತಿಯ ಸಬ್ಸಿಡಿಗಳು, ಅನುದಾನಗಳು, ಮಜೂರಿಗಳು ಮತ್ತಿತರ ಸಾಮಾಜಿಕ ಯೋಜನಕಾರಿ ಯೋಜನೆಗಳ ವಿತರಣೆಗಾಗಿ ಉದ್ದೇಶಿತ ಫಲಾನುಭವಿಗಳನ್ನು ಸರಿಯಾಗಿ ಗುರುತಿಸಲು ಆಧಾರ್ ಅನ್ನು ಬಳಸಿಕೊಳ್ಳಲಾಗುತ್ತದೆ. ಮತ್ತು ಇವು ಸರಿಯಾಗಿ ತಲುಪುತ್ತಿವೆ ಎಂಬುದನ್ನು ಖಚಿತ ಪಡಿಸಿಕೊಳ್ಳಲೂ ನೆರವಾಗುತ್ತದೆ ಎಂದು ಪ್ರಸ್ತಾಪಿಸಲಾಗಿದೆ.

ಆಧಾರ್ ಅನ್ನು ಏಕೈಕ ಗುರುತಿಸುವಿಕೆ ಎಂದು ಬಳಸುವ ಮೂಲಕ ರಾಜ್ಯದಲ್ಲಿ ವಾಸ ಮಾಡುತ್ತಿರುವ ವ್ಯಕ್ತಿಗಳಿಗೆ ರಾಜ್ಯ ಸರ್ಕಾರದ ಸಂಚಿತ ನಿಧಿಯಿಂದ ಅಥವಾ ರಾಜ್ಯ ಸರ್ಕಾರದ ಯಾವುದೇ ಏಜೆನ್ಸಿಯ ಮೂಲಕ ಭರಿಸಿದ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ಉತ್ತಮ ನಿರ್ವಹಣೆ, ದಕ್ಷ, ಪಾರದರ್ಶಕ ಮತ್ತು ಉದ್ದೇಶಿತ ವಿತರಣೆಗೆ ಈ ವಿಧೇಯಕ ಅಗತ್ಯ ಎಂದು ಹೇಳಲಾಗಿದೆ.

loader