ಅಸ್ಸಾಂ,,ಗೋಲ್ಘಾಟ್‌[ಫೆ.22]  ಜಿಲ್ಲೆಯಲ್ಲಿ ವಿಷಕಾರಿ ಮದ್ಯ ಸೇವಿಸಿ 25 ಮಂದಿ ಸಾವನ್ನಪ್ಪಿದ್ದು ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಗೋಲ್ಘಾಟ್‌ನ ಶಾಲಮಾರ ಪ್ರಾಂತ್ಯದ ಕೂಲಿ ಕಾರ್ಮಿಕರು ವಿಷಕಾರಿ ಮದ್ಯದ ಬಾಯಿಗೆ ಸಿಲುಕಿದ್ದಾರೆ.

ಅಸ್ಸಾಂನ ಅಬಕಾರಿ ಇಲಾಖೆಯ ಪಿಆರ್‌ಒ ಸೈಲೇನ್‌ ಪಾಂಡೇ ಅವರು 25 ಮಂದಿ ಸಾವನ್ನಪ್ಪಿರುವ ಬಗ್ಗೆ ಖಚಿತ ಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ  ಇಬ್ಬರು ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಲಾಗಿದೆ.

ದುರಂತದ ನಂತರ ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಹರಸಾಹಸ ಪಟ್ಟರು. ಪ್ರತಿಭಟನೆಗಳು ನಡೆದಿದ್ದು ಪೊಲೀಸರು ಮತ್ತು ನಾಗರಿಕರ ನಡುವೆ ಸಂಘರ್ಷ ನಡೆಯಿತು.  ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿಯೂ ಕಳ್ಳ ಭಟ್ಟಿ ದುರಂತ ಸಂಭವಿಸಿತ್ತು.