ಅಮೃತಧಾರೆಯಲ್ಲಿ ಗೌತಮ್ಗೆ ಕಾಣೆಯಾಗಿರುವ ಮಗಳು ಸಿಗ್ತಾಳಾ? ಸ್ಯಾಂಡಲ್ವುಡ್ ನಟಿ ಮಿಲನಾ ನಾಗರಾಜ್ ಹೇಳಿದ್ದೇನು ಕೇಳಿ...
ಅಮೃತಧಾರೆಯಲ್ಲಿ ಸದ್ಯ ಸುಧಾಳ ವಿಷ್ಯ ನಡೆಯುತ್ತಿದೆ. ಒಂದೆಡೆ ಸುಧಾಳ ಬಾಳಲ್ಲಿ ಹೊಸ ಯುಗ ಆರಂಭವಾಗುವಷ್ಟರಲ್ಲಿಯೇ ಪತಿ ಎಂಟ್ರಿಕೊಟ್ಟಿದ್ದು, ಬಿರುಗಾಳಿ ಎಬ್ಬಿಸಿದ್ದಾನೆ. ಅದೇ ಇನ್ನೊಂದೆಡೆ, ಭೂಮಿಕಾಳ ಇನ್ನೊಂದು ಮಗು ಏನಾಯಿತು ಎಂದು ತಿಳಿಯಬೇಕಿದೆ. ಸದ್ಯ ಅವಳಿ ಮಕ್ಕಳಲ್ಲಿ ಒಂದು ಮಗು ಕಳೆದುಕೊಂಡಿರುವ ವಿಷಯ ಭೂಮಿಕಾಗೆ ಗೊತ್ತಿಲ್ಲ. ಇದನ್ನು ಆಕೆಗೆ ಹೇಗೆ ಹೇಳುವುದು ಎಂದು ತಿಳಿಯದೇ ಗೌತಮ್ ನೋವಿನಲ್ಲಿ ಇದ್ದಾನೆ. ಇರುವ ಒಂದು ಮಗುವನ್ನು ಶಕುಂತಲಾ ಇನ್ನೇನು ಮಾಡಿಬಿಟ್ಟಾಳೋ ಎನ್ನುವ ಭಯದಲ್ಲಿ ವೀಕ್ಷಕರು ಇದ್ದಾರೆ. ಇವೆಲ್ಲವುಗಳ ನಡುವೆಯೇ ಗೌತಮ್ ಇದೀಗ ಕಾಣೆಯಾಗಿರುವ ಮಗಳನ್ನು ಹುಡುಕಿ ಹೊರಟಿದ್ದು, ಅದನ್ನು ತರುವ ಭರವಸೆ ಕೊಟ್ಟಿದ್ದಾನೆ. ಇದರ ಬಗ್ಗೆ ನಟಿ ಮಿಲನಾ ನಾಗರಾಜ್ ಮಾತನಾಡಿದ್ದಾರೆ.
ಅಷ್ಟಕ್ಕೂ ಸೀರಿಯಲ್ಗಳಲ್ಲಿ ನಟಿಯರುನ್ನು ತಂದು ಪ್ರಮೋಷನ್ ಮಾಡುವುದು ಹೊಸ ವಿಷಯವೇನಲ್ಲ. ಅದೇ ರೀತಿ ಇದೀಗ ಅಮೃತಧಾರೆ ಮತ್ತು ಲಕ್ಷ್ಮೀನಿವಾಸ ಸೀರಿಯಲ್ಗಳ ಬಗ್ಗೆ ಪ್ರಮೋಷನ್ ಮಾಡುತ್ತಿದ್ದಾರೆ ನಟಿ ಮಿಲನಾ. ಇದರಲ್ಲಿ ಗೌತಮ್ ತನ್ನ ಮಗಳನ್ನು ತಂದೇ ತರುತ್ತೇನೆ ಎಂದು ಪ್ರಾಮಿಸ್ ಮಾಡಿದ್ರೆ, ಅತ್ತ ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ ಟ್ವಿಸ್ಟ್ಗಳನ್ನೂ ತೋರಿಸಲಾಗಿದೆ. ಆದಷ್ಟು ಬೇಗ ಗೌತಮ್ಗೆ ಮಗಳು ಸಿಗಲಿ ಎಂದು ನೆಟ್ಟಿಗರು ಹಾರೈಸುತ್ತಿದ್ದಾರೆ. ಆದರೆ ಸೀರಿಯಲ್ ಇನ್ನಷ್ಟು ವರ್ಷ ಎಳೆಯಬೇಕು ಎಂದಾದರೆ ಗೌತಮ್ಗೆ ಮಗಳು ಸಿಗುವುದು ತುಂಬಾನೇ ಕಷ್ಟ ಎಂದೂ ತಾವೇ ಕಮೆಂಟ್ಗಳಲ್ಲಿ ಹೇಳುತ್ತಿದ್ದಾರೆ ಸೀರಿಯಲ್ ವೀಕ್ಷಕರು.
ಅದೇ ಇನ್ನೊಂದೆಡೆ, ಭೂಮಿಕಾಳ ಶಾಲಿಗೆ ಇನ್ನಿಲ್ಲದಂತೆ ಜೋಕ್ ಮಾಡುತ್ತಿದ್ದ ನೆಟ್ಟಿಗರು, ಈಗ ಗಮನವನ್ನು ಆಕೆ ತೊಟ್ಟಿರೋ ಸ್ವೆಟ್ಟರ್ನತ್ತ ನೆಟ್ಟಿದ್ದಾರೆ. ಅದೇ ಇನ್ನೊಂದೆಡೆ, ಬಾಳಂತಿಯಾದರೂ ದುಬಾರಿ ಸೀರೆಯುಟ್ಟು ಯಾರಾದರೂ ಮನೆಯಲ್ಲಿ ಇರ್ತಾರಾ ಎಂದು ಹಲವರು ಪ್ರಶ್ನಿಸುತ್ತಿದ್ದರೆ, ಹೂವು ಮುಡಿದುಕೊಂಡು ದಿನವೂ ಓಡಾಡುವ ಬಾಳಂತಿಯನ್ನು ನಾನು ಇದುವರೆಗೂ ನೋಡಿಯೇ ಇಲ್ಲ ಎಂದು ಮತ್ತೆ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಭೂಮಿಕಾಳ ಹೊಟ್ಟೆ ಹೋಗಿ ಶಾಲು ನೋಡುವ ಸ್ಥಿತಿ ಬಂದಿದೆ ಎಂದು ಮತ್ತಷ್ಟು ಕಮೆಂಟಿಗರು ಹೇಳುತ್ತಿದ್ದು, ಇದೀಗ ಆ ಜಾಗದಲ್ಲಿ ಸ್ವೆಟ್ಟರ್ ಬಂತು ಬಿಡಿ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸೀರಿಯಲ್ಗಳಲ್ಲಿ ಯಾರು ಏನು ಮಾಡಿದರೂ ಅದಕ್ಕೆ ಕಮೆಂಟ್ ಹಾಕುವ ದೊಡ್ಡ ವರ್ಗವೇ ಇದೆ.
ಅದರಲ್ಲಿಯೂ ಅಮೃತಧಾರೆಯಲ್ಲಿ ಪುಟ್ಟ ಮಗು ಸಿಗದಿದ್ದ ಕಾರಣಕ್ಕೋ ಏನೋ, ಸ್ವಲ್ಪ ದೊಡ್ಡ ಮಗುವನ್ನು ಕರೆದುಕೊಂಡು ಬರಲಾಗಿದೆ. ಅದಕ್ಕೂ ನೆಟ್ಟಿಗರು ಮಾಡ್ತಿರೋ ತಮಾಷೆ ಅಷ್ಟಿಷ್ಟಲ್ಲ. ಮಗು ಹುಟ್ಟುತ್ತಲೇ ಒಂದು ವರ್ಷವಾಗಿಬಿಟ್ಟದೆ ಎಂದೂ ತಮಾಷೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಭೂಮಿಕಾಳ ಪ್ರತಿಯೊಂದು ಹೆಜ್ಜೆಯನ್ನೂ ನೆಟ್ಟಿಗರು ಚಾಚೂತಪ್ಪದೇ ನೋಡುತ್ತಿರುವುದು ಇದರಿಂದ ತಿಳಿಯುತ್ತದೆ. ಇನ್ನೇನು ಭೂಮಿಕಾಗೆ ಮಗು ಹುಟ್ಟಿತು. ಶಕುಂತಲಾ, ಜೈದೇವನ ಕುತಂತ್ರವೂ ಬಯಲಾಯ್ತು. ಸೀರಿಯಲ್ ಮುಗಿದೇ ಬಿಡ್ತು ಎನ್ನುವಾಗಲೇ ಏನೇನೋ ಟ್ವಿಸ್ಟ್ ತರಲಾಗಿದೆ. ಅಷ್ಟಕ್ಕೂ ಈ ಸೀರಿಯಲ್ಗೆ ಟಿಆರ್ಪಿ ಹೆಚ್ಚಿಗೆ ಇರುವ ಕಾರಣ, ಸೀರಿಯಲ್ ಎಳೆಯುವುದು ಕೂಡ ಅನಿವಾರ್ಯವೇ ಬಿಡಿ.
