ನೀವು ಆ್ಯಂಡ್ರಾಯ್ಡು ಫೋನ್ ಬಳಸುತ್ತಿದ್ದೀರಾ? ಆ.1ರಿಂದ ಈ ಸ್ಮಾರ್ಟ್‌ಫೋನ್ ಕೆಲಸ ಮಾಡಲ್ಲ!

ನೀವು ಆ್ಯಂಡ್ರಾಯ್ಡ್ ಫೋನ್ ಬಳಸುತ್ತಿದ್ದೀರಾ? ಹಾಗಾದರೆ ಆಗಸ್ಟ್ 1 ರಿಂದ ಈ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ವೇಸ್ಟ್. ಈ ಫೋನ್‌ನಲ್ಲಿರುವ ಯಾವುದೇ ಆ್ಯಪ್‌ಗಳು ಕಾರ್ಯನಿರ್ವಹಿಸಲ್ಲ. ಬಳಕೆ ಮಾಡಲು ಸಾಧ್ಯವಿಲ್ಲ. ಹಾಗಾದರೆ ಆಗಸ್ಟ್ 1 ರಿಂದ ಯಾವ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ಸ್ಥಗಿತಗೊಳ್ಳಲಿದೆ? ಇಲ್ಲಿದೆ ವಿವರ.
 

These Android smartphone support discontinued by google from august 1st phones become junk ckm

ಬೆಂಗಳೂರು(ಜು.27): ಭಾರತದಲ್ಲಿ ಪ್ರತಿ ದಿನ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿದೆ. ಇನ್ನು ಬಿಡುಗಡೆಯಾಗಿರುವ ಫೋನ್‌ಗಳು ಅಪ್‌ಗ್ರೇಡ್ ವರ್ಶನ್ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಐಫೋನ್‌ಗೆ ಹೋಲಿಸಿದರೆ ಭಾರತದಲ್ಲಿ ಆ್ಯಂಡ್ರಾಯ್ಡ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚು. ಆ್ಯಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಮಹತ್ವದ ಸೂಚನೆಯೊಂದಿದೆ. ಆಗಸ್ಟ್ 1ರಿಂದ ಈ ಸ್ಮಾರ್ಟ್‌ಫೋನ್ ಕೆಲಸ ಮಾಡಲ್ಲ. ಈ ಫೋನ್‌ನಲ್ಲಿರುವ ಯಾವುದೇ ಆ್ಯಪ್‌ಗಳು ಕಾರ್ಯನಿರ್ವಹಿಸಲ್ಲ. ಪ್ರಮುಖವಾಗಿ ಗೂಗಲ್ ಕೆಲ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಸಪೋರ್ಟ್ ನಿಲ್ಲಿಸಲಿದೆ. ಹಾಗಾದರೆ ಯಾವ ಆ್ಯಂಡ್ರಾಯ್ಡ್ ಫೋನ್ ಆಗಸ್ಟ್ 1 ರಿಂದ ಕಾರ್ಯನಿರ್ವಹಣೆ ನಿಲ್ಲಿಸಲಿದೆ? 

ಆಗಸ್ಟ್ 1 ರಿಂದ 4.4 ಕಿಟ್‌ಕ್ಯಾಟ್(KitKat) ವರ್ಶನ್ ಫೋನ್ ಕಾರ್ಯನಿರ್ವಹಿಸಲ್ಲ. ಸದ್ಯ ಇರುವ ಆ್ಯಂಡ್ರಾಯ್ಡ್ ಫೋನ್‌ಗಳಿಗೆ ಯಾವುದೇ ಸಮಸ್ಯೆ ಇಲ್ಲ. 2013ರಲ್ಲಿ ಕಿಟ್‌ಕ್ಯಾಟ್ ವರ್ಶನ್ ಆ್ಯಂಡ್ರಾಯ್ಡ್ ಫೋನ್ ಬಿಡುಗಡೆ ಮಾಡಲಾಗಿದೆ. 10 ವರ್ಷಗಳ ಹಿಂದಿನ ಆ್ಯಂಡ್ರಾಯ್ಡ್ ಫೋನ್‌ನಲ್ಲಿ ಗೂಗಲ್ ಸಿಸ್ಟಮ್ ವರ್ಕ್ ಆಗಲ್ಲ. ಫೋನ್‌ನಲ್ಲಿರುವ ಆ್ಯಪ್‌ಗಳು ಕಾರ್ಯನಿರ್ವಹಿಸಲ್ಲ. ಹೀಗಾಗಿ 4.4 ಕಿಟ್‌‌ಕ್ಯಾಟ್ ವರ್ಶನ್ ಫೋನ್ ಸಂಪೂರ್ಣ ವೇಸ್ಟ್ ಆಗಲಿದೆ.

 

Whatsapp ಬಳಕೆದಾರರಿಗೆ ಬಂಪರ್ ಫೀಚರ್, HD ಫೋಟೋ ಕಳುಹಿಸಲು ಅವಕಾಶ!

ಸದ್ಯ ಬಳಕೆ ಮಾಡುತ್ತಿರುವ ಆ್ಯಂಡ್ರಾಯ್ಡ್ ಫೋನ್‌ಗಳ ಪೈಕಿ ಶೇಕಡಾ 1 ರಷ್ಟು ಮಂದಿ ಮಾತ್ರ 4.4 ಕಿಟ್‌ಕ್ಯಾಟ್ ವರ್ಶನ್ ಫೋನ್ ಬಳಕೆ ಮಾಡುತ್ತಿದ್ದಾರೆ. ಕಿಟ್‌ಕ್ಯಾಟ್ ಆಪರೇಟಿಂಗ್ ಸಿಸ್ಟಮ್(OS) ಹೊಂದಿರುವ ಆ್ಯಂಡ್ರಾಯ್ಡ್ ಫೋನ್ ಆಗಸ್ಟ್ 1 ರಿಂದ ಬಳಕೆಗೆ ಯೋಗ್ಯವಾಗುವುದಿಲ್ಲ.ಹಾಗಂತ ಸದ್ಯ ಆ್ಯಂಡ್ರಾಯ್ಡ್ ಫೋನ್ ಬಳಕೆದಾರರು ಆತಂಕ ಪಡುವ ಅಗತ್ಯವಿಲ್ಲ. ಕಾರಣ ಭಾರತದಲ್ಲಿ ಕಿಟ್‌ಕ್ಯಾಟ್ ಫೋನ್ ಬಳಕೆ ಮಾಡುತ್ತಿರುವವರ ಸಂಖ್ಯೆ ಬೆರಳೆಣಿಕೆ ಮಾತ್ರ.

ಕಾರಣ ಯಾವುದೇ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ 10 ವರ್ಷ ಬಾಳಿಕೆ ಬರುವುದಿಲ್ಲ. ಕಿಟ್‌ಕ್ಯಾಟ್ ಆಪರೇಟಿಂಗ್ ಸಿಸ್ಟಮ್ 2013ರಲ್ಲಿ ಬಿಡುಗಡೆಯಾಗಿತ್ತು. 2013ರಲ್ಲಿ ಬಿಡುಗಡೆಯಾದ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ಮಾತ್ರ ಕಿಟ್‌ಕ್ಯಾಟ್ ಓಎಸ್ ಹೊಂದಿದೆ. 2014ರಲ್ಲಿ ಜಪ್ರಿಯ ಲಾಲಿಪಾಪ್ ಆಪರೇಟಿಂಗ್ ಸಿಸ್ಟಮ್ ಫೋನ್‌ಗಳು ಮಾರುಕಟ್ಟೆ ಪ್ರವೇಶಿಸಿದೆ. ಇದಾದ ಬಳಿಕ ಮಾರ್ಶ್‌ಮಲ್, ನೌಗಟ್, ಒರಿಯೋ, ಪೈ ಸೇರಿದಂತೆ ಹಲವು ಆಪರೇಟಿಂಗ್ ಸಿಸ್ಟಮ್ ಬಿಡುಗಡೆಯಾಗಿದೆ. 

ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಗೂಗಲ್ ಎಚ್ಚರಿಕೆ, ಮೊಬೈಲ್ ಹ್ಯಾಕ್ ಅಪಾಯ!

2019ರಿಂದ ಆಪರೇಟಿಂಗ್ ಸಿಸ್ಟಮ್ ಹೆಸರಿನಲ್ಲಿ ಮಹತ್ವದ ಬದಲಾವಣೆಯಾಗಿದೆ. 2019ರಲ್ಲಿ ಆಪರೇಟಿಂಗ್ ಸಿಸ್ಟಮ್ 10, 2020ರಲ್ಲಿ ಆಪರೇಟಿಂಗ್ ಸಿಸ್ಟಮ್ 11 ಇದೀಗ ಅಂದರೆ 2023ರಲ್ಲಿ ಆಪರೇಟಿಂಗ್ ಸಿಸ್ಟಮ್ 13 ಚಾಲ್ತಿಯಲ್ಲಿದೆ. 
 

Latest Videos
Follow Us:
Download App:
  • android
  • ios