Asianet Suvarna News Asianet Suvarna News

Christmas 2022: ಚಿತ್ರವಿಚಿತ್ರವಾಗಿ ಕ್ರಿಸ್ಮಸ್ ಆಚರಿಸುವ ದೇಶಗಳಿವು

ಕ್ರಿಸ್ಮಸ್ ಅಂದ್ರೆ ಚರ್ಚ್ ಗೆ ಹೋಗಿ ಹಬ್ಬ ಆಚರಣೆ ಮಾಡೋದು ಅಂತ ನಾವೆಲ್ಲ ಅಂದ್ಕೊಂಡಿದ್ದೇವೆ. ಆದ್ರೆ ಬೇರೆ ದೇಶಗಳಲ್ಲಿ ಕ್ರಿಸ್ಮಸ್ ಸಂದರ್ಭದಲ್ಲಿ ಬರೀ ಚರ್ಚ್ ಗೆ ಹೋಗೋದಿಲ್ಲ. ಬೇರೆ ಬೇರೆ ಪದ್ಧತಿಗಳನ್ನು ಆಚರಿಸುತ್ತಾರೆ.
 

Merry Christmas 2022
Author
First Published Dec 23, 2022, 7:13 PM IST

ಕ್ರಿಸ್‌ಮಸ್ ಹಬ್ಬದ ತಯಾರಿ ಜೋರಾಗಿ ನಡೆದಿದೆ. ಡಿಸೆಂಬರ್ 25 ರಂದು ಏಸು ಕ್ರಿಸ್ತನ ಜನ್ಮ ದಿನವನ್ನು ವಿಶ್ವದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಭಾರತದಲ್ಲಿ ಚರ್ಚ್ ಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಕ್ರಿಸ್ಮಸ್ ಆಚರಣೆ ನಡೆಯುತ್ತದೆ. ಆದ್ರೆ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಕ್ರಿಸ್ಮಸ್ ಆಚರಣೆ ಭಿನ್ನವಾಗಿದೆ. ನಾವಿಂದು ಕೆಲ ಅಚ್ಚರಿ ಹುಟ್ಟಿಸುವ ಕ್ರಿಸ್ಮಸ್ ಆಚರಣೆಯ ಬಗ್ಗೆ ನಿಮಗೆ ಮಾಹಿತಿ ನೀಡ್ತೆವೆ. 

ನಾರ್ವೆ (Norway) ಯಲ್ಲಿ ಹೀಗಿರುತ್ತೆ ಕ್ರಿಸ್ಮಸ್ : ನಾರ್ವೆಯಲ್ಲಿ ಕ್ರಿಸ್ಮಸ್ ಸಂಪ್ರದಾಯದಂತೆ  ಜನರು ಕ್ರಿಸ್ಮಸ್ ದಿನದಂದು ತಮ್ಮ ಮನೆಗಳಲ್ಲಿರುವ ಪೊರಕೆಗಳನ್ನು ಅಡಗಿಸಿಡುತ್ತಾರೆ. ಈ ದಿನ ದುಷ್ಟಶಕ್ತಿಗಳು ಹಾರಲು ಪೊರಕೆಗಳನ್ನು ಹುಡುಕುತ್ತವೆ ಎಂದು ಅಲ್ಲಿನ ಜನರು ನಂಬಿದ್ದಾರೆ. ದುಷ್ಟಶಕ್ತಿಗಳಿಗೆ ಪೊರಕೆ ಸಿಗಬಾರದು ಎನ್ನುವ ಕಾರಣಕ್ಕೆ ಪೊರಕೆಯನ್ನು ಅಡಗಿಸಿಡುವ ಪದ್ಧತಿ ಅಲ್ಲಿದೆ.  

ಫಿಲಿಪೈನ್ಸ್ (Philippines) ಕ್ರಿಸ್ಮಸ್ ಅದ್ಭುತ : ಸ್ಯಾನ್ ಫೆರ್ನಾಂಡೋವನ್ನು ಫಿಲಿಪೈನ್ಸ್ ನ ಕ್ರಿಸ್ಮಸ್ ರಾಜಧಾನಿ ಎಂದೂ ಕರೆಯಲಾಗುತ್ತದೆ. ಇಲ್ಲಿ ಕ್ರಿಸ್ಮಸ್ ಹಬ್ಬವನ್ನು  ಅದ್ಭುತವಾಗಿದೆ ಆಚರಿಸಲಾಗುತ್ತದೆ.  ಪ್ರಪಂಚದಾದ್ಯಂತ ಜನರು ಇಲ್ಲಿನ ಸಂಭ್ರಮ ನೋಡಲು  ಬರುತ್ತಾರೆ. ಕ್ರಿಸ್‌ಮಸ್ ಮುನ್ನಾ ದಿನ   ಜೈಂಟ್ ಲ್ಯಾಂಟರ್ನ್ ಉತ್ಸವ ನಡೆಯುತ್ತದೆ.  11 ಗ್ರಾಮಗಳ ಜನರು ಇದರಲ್ಲಿ ಪಾಲ್ಗೊಳ್ಳುತ್ತಾರೆ.

Christmas 2022: ಕ್ರಿಸ್ಮಸ್ ದಿನದ ವಿಶೇಷತೆ, ಸಂಪ್ರದಾಯಗಳೇನು?  

ವೆನೆಜುವೆಲಾ (Venezuela) ಚರ್ಚ್ ನಲ್ಲಿ ಹಬ್ಬ :  ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್‌ನಲ್ಲಿ ಕ್ರಿಸ್ಮಸ್ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಕ್ರಿಸ್‌ಮಸ್‌ ದಿನದಂದು ನಗರದ ಜನರು ಚರ್ಚ್ನಲ್ಲಿ ಹಬ್ಬ ಆಚರಿಸುತ್ತಾರೆ. ಇಲ್ಲಿನ ಜನರು ಚರ್ಚ್ ರೋಲರ್ ಸ್ಕೇಟ್‌ಗಳೊಂದಿಗೆ ಸ್ಕೇಟಿಂಗ್‌ಗೆ ಹೋಗುತ್ತಾರೆ. ಇದು ಸಂಪ್ರದಾಯದ ಒಂದು ಭಾಗವಾಗಿದೆ.

ಉಕ್ರೇನ್ ನಲ್ಲಿ ಗಮನ ಸೆಳೆಯುವ ಕ್ರಿಸ್ಮಸ್ ಟ್ರೀ : ಇಲ್ಲಿ ಕ್ರಿಸ್ಮಸ್ ಮರವನ್ನು ವಿಶಿಷ್ಟ ರೀತಿಯಲ್ಲಿ ಅಲಂಕರಿಸಲಾಗುತ್ತದೆ. ಒಂದು ಕಥೆಯ ಪ್ರಕಾರ, ಒಬ್ಬ ಬಡ ಮಹಿಳೆ ತನ್ನ ಮಗನ ಇಷ್ಟದಂತೆ ಕ್ರಿಸ್ಮಸ್ ವೃಕ್ಷವನ್ನು ಅಲಂಕರಿಸಲು ಸಾಧ್ಯವಾಗಲಿಲ್ಲವಂತೆ. ಆಗ  ಜೇಡಗಳು ಅವಳಿಗೆ ಕರುಣೆ ತೋರಿದವಂತೆ. ಇಡೀ ಕ್ರಿಸ್ಮಸ್ ವೃಕ್ಷವನ್ನು ತಮ್ಮ ಬಲೆಯಿಂದ ಅಲಂಕರಿಸಿದವಂತೆ. ಅಂದಿನಿಂದ ಇಲ್ಲಿ ಕ್ರಿಸ್ಮಸ್ ಗಿಡವನ್ನು ಜೇಡದ ಬಲೆಯಂತೆ ಅಲಂಕರಿಸಲಾಗುತ್ತದೆ.  

ಪೋರ್ಚುಗಲ್ನಲ್ಲಿ ಪೂರ್ವಜರ ಹಬ್ಬ :  ಇನ್ನು ಪೋರ್ಚುಗಲ್‌ನಲ್ಲಿ ಕ್ರಿಸ್ಮಸ್ ದಿನವನ್ನು ಭಿನ್ನವಾಗಿ ಆಚರಿಸಲಾಗುತ್ತದೆ. ಅಲ್ಲಿನ ಜನರು ಕ್ರಿಸ್ಮಸ್ ದಿನವನ್ನು ಪೂರ್ವಜರಿಗೆ ಮೀಸಲಿಡುತ್ತಾರೆ. ಪೂರ್ವಜರು ಕ್ರಿಸ್ಮಸ್ ದಿನದಂದು ಭೂಮಿಗೆ ಬರ್ತಾರೆ ಎನ್ನುವ ನಂಬಿಕೆ ಅವರಲ್ಲಿದೆ. ಹಾಗಾಗಿ ಪೂರ್ವಜರಿಗಾಗಿ ಅಡುಗೆ ತಯಾರಿಸಿ ವಿಶೇಷ ಫಲಕಗಳನ್ನು ಇಟ್ಟು, ಊಟದ ಮೇಜನ್ನು ಅಲಂಕರಿಸುತ್ತಾರೆ. 
 
ಆಸ್ಟ್ರಿಯಾದಲ್ಲಿ ತುಂಟ ಮಕ್ಕಳಿಗೆ ಶಿಕ್ಷೆ : ಆಸ್ಟ್ರಿಯಾದಲ್ಲಿ ಈ ದಿ  ಭಯಾನಕ ಕಾಡು ಪ್ರಾಣಿಯಂತೆ ವೇಷ ಧರಿಸಿರುವ ವ್ಯಕ್ತಿಯೊಬ್ಬ ನಗರದ ಬೀದಿಗಳಲ್ಲಿ ಸಂಚರಿಸುತ್ತಾನೆ. ಕೆಟ್ಟವರೆಂದು ಪರಿಗಣಿಸಲ್ಪಟ್ಟ ಮಕ್ಕಳನ್ನು ಅವನು ಶಿಕ್ಷಿಸುತ್ತಾನೆ. ಕ್ರಿಸ್ ಮಸ್ ದಿನ ಸೇಂಟ್ ನಿಕೋಲಸ್ ಚಿಕ್ಕ ಮಕ್ಕಳಿಗೆ ಬಹುಮಾನ ನೀಡುತ್ತಿದ್ದರು. ಅವನ ಸಹಚರ ಕ್ರಾಂಪಸ್ ತುಂಟತನ ಮಾಡುವ ಮಕ್ಕಳನ್ನು ಹೆದರಿಸುತ್ತಿದ್ದ. ಇದೇ ಕಾರಣದಿಂದ ಈ ಸಂಪ್ರದಾಯವನ್ನು ಈಗ್ಲೂ ಮುಂದುವರೆಸಿಕೊಂಡು ಬರಲಾಗಿದೆ. 

Christmas 2022: ಬಾಯಲ್ಲಿ ನೀರೂರಿಸೋ ಸ್ಪೆಷಲ್‌ ಕುಕೀಸ್‌, ಸಿಂಪಲ್ ರೆಸಿಪಿ ಇಲ್ಲಿದೆ

ಸ್ಪೇನ್ ನಲ್ಲಿದೆ ವಿಭಿನ್ನ ಪದ್ಧತಿ :  ಇಲ್ಲಿ ಕ್ರಿಸ್ಮಸ್ ಅನ್ನು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ದಿನ ಮರದ ಒಂದು ಭಾಗವನ್ನು ಕಂಬಳಿಯಿಂದ ಮುಚ್ಚಲಾಗುತ್ತದೆ.  ಇನ್ನೊಂದು ಭಾಗದಲ್ಲಿ ಮೂಗು, ಬಾಯಿ ಮತ್ತು ಕಣ್ಣುಗಳನ್ನು ಕೆತ್ತಲಾಗುತ್ತದೆ.  ಇದಕ್ಕೆ ಮೊದಲು ಆಹಾರವನ್ನು ನೀಡಲಾಗುತ್ತದೆ. ಕ್ರಿಸ್ಮಸ್ ಸಂಜೆ ಕೋಲುಗಳಿಂದ ಅದಕ್ಕೆ ಹೊಡೆಯಲಾಗುತ್ತದೆ.   

Follow Us:
Download App:
  • android
  • ios