ಪುರುಷರೇ ಎಚ್ಚರ : ನಿಮಗೂ ಕಾಡಬಹುದು ಇಂತಹ ಸಮಸ್ಯೆ..!

life | 3/18/2018 | 7:48:00 AM
sujatha A
Suvarna Web Desk
Highlights

ಪುರುಷರೇ ಎಚ್ಚರ ನಿಮಗೂ ಇಂತಹ ಸಮಸ್ಯೆಗಳು ಕಾಡಬಹುದು. ಇತ್ತೀಚೆಗೆ ನಡೆದ ಸಂಶೋಧನೆಯೊಂದರ ಪ್ರಕಾರವಾಗಿ ಯಾವ ಪುರುಷನಲ್ಲಿ ಸ್ಪರ್ಮ್ ಕಡಿಮೆ ಇರುತ್ತದೆಯೋ ಅಂತಹವರಲ್ಲಿ ಮಕ್ಕಳಾಗುವುದರ ಸಮಸ್ಯೆಯೊಂದಿಗೆ ಆರೋಗ್ಯ ಸಮಸ್ಯೆಯೂ ಹೆಚ್ಚು ಕಾಡುತ್ತದೆ ಎಂದು ಹೇಳಿದೆ.

ವಾಷಿಂಗ್ಟನ್ : ಪುರುಷರೇ ಎಚ್ಚರ ನಿಮಗೂ ಇಂತಹ ಸಮಸ್ಯೆಗಳು ಕಾಡಬಹುದು. ಇತ್ತೀಚೆಗೆ ನಡೆದ ಸಂಶೋಧನೆಯೊಂದರ ಪ್ರಕಾರವಾಗಿ ಯಾವ ಪುರುಷನಲ್ಲಿ ಸ್ಪರ್ಮ್ ಕಡಿಮೆ ಇರುತ್ತದೆಯೋ ಅಂತಹವರಲ್ಲಿ ಮಕ್ಕಳಾಗುವುದರ ಸಮಸ್ಯೆಯೊಂದಿಗೆ ಆರೋಗ್ಯ ಸಮಸ್ಯೆಯೂ ಹೆಚ್ಚು ಕಾಡುತ್ತದೆ ಎಂದು ಹೇಳಿದೆ.

ಅಲ್ಲದೇ ಅನಾರೋಗ್ಯ ಕಾಡುವ ಅಂಶ ಅವರಲ್ಲಿ ಶೇ.20ರಷ್ಟು ಹೆಚ್ಚು ಎಂದೂ ಕೂಡ ಹೇಳಲಾಗುತ್ತದೆ. ಇವರಿಗೆ ಪ್ರಮುಖವಾಗಿ ಕಾಡುವ ಸಮಸ್ಯೆಗಳೆಂದರೆ ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಶೇಖರಣೆಯಾಗುತ್ತದೆ. ಹಾಗೂ ರಕ್ತದ ತ್ತಡ ಸಮಸ್ಯೆಯೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಾಡುತ್ತದೆ ಎನ್ನಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಹೆಚ್ಚು ಕಾಡುತ್ತಿದ್ದು, ಆಧುನಿಕ ಜೀವನ ಶೈಲಿ ಹಾಗೂ ಆಹಾರಗಳೇ ಕಾರಣ ಎನ್ನಲಾಗುತ್ತದೆ. ಅಲ್ಲದೇ ಇವರಲ್ಲಿ ಡಯಾಬಿಟೀಸ್ ಕಾಡುವ ಸಾಧ್ಯತೆಯೂ ಕೂಡ ಹೆಚ್ಚಿದೆ.

ಹೃದಯದ ಸಮಸ್ಯೆಗಳೂ ಕೂಡ ಕಾಡಬಹುದು ಎಂದು ಸಂಶೋಧನೆಯೊಂದು ದೃಢಪಡಿಸಿದೆ. ಎಲುಬುಗಳ ಸಮಸ್ಯೆಯು ಕಾಡುವ ಸಾಧ್ಯತೆಯೂ ಕೂಡ ಹೆಚ್ಚಿಸುತ್ತದೆ ಎಂದು ಈ ಸಂಶೋಧನೆಯು ತಿಳಿಸುತ್ತದೆ.

Comments 0
Add Comment