Asianet Suvarna News Asianet Suvarna News

Viral News: ಪತ್ನಿ ಹೆರಿಗೆ ನೋಡಿ ಅಸ್ವಸ್ಥನಾದ ಪತಿ 72 ಲಕ್ಷ ಬೇಡಿಕೆ ಇಟ್ಟ!

ಹೆರಿಗೆ ಸಂದರ್ಭದಲ್ಲಿ ವೈದ್ಯರು, ನರ್ಸ್ ಬಿಟ್ಟರೆ ಬೇರೆ ಯಾವುದೇ ವ್ಯಕ್ತಿಗೆ ಪ್ರವೇಶ ಇರೋದಿಲ್ಲ. ಅದನ್ನು ನೋಡಲು ಧೈರ್ಯ ಬೇಕು. ಮಾನಸಿಕವಾಗಿವಾಗಿ ದುರ್ಬಲರಾಗಿರುವವರು ಇಂಥ ಘಟನೆ ನೋಡಿದ್ರೆ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಆಸ್ಟ್ರೇಲಿಯಾದಲ್ಲೂ ಇಂಥದ್ದೇ ಘಟನೆ ನಡೆದಿದೆ.
 

Man Gets Scared After Seeing Wife Baby Delivery Psychotic Illness Triggered Sues Hospital roo
Author
First Published Sep 18, 2023, 4:04 PM IST | Last Updated Sep 18, 2023, 4:04 PM IST

ಕೆಟ್ಟ ಜೀವನಶೈಲಿ, ಆಹಾರ ಪದ್ಧತಿ, ಸದಾ ಜನರನ್ನು ಬ್ಯುಸಿಗೊಳಿಸುವ ಕೆಲಸ ಮಾನಸಿಕ ಒತ್ತಡಕ್ಕೆ ಕಾರಣವಾಗಿಸುತ್ತಿದೆ, ಮಾನಸಿಕ ಒತ್ತಡ ಸಾಮಾನ್ಯ ಎನ್ನುವಂತಾಗಿದೆ. ಒತ್ತಡ ಜನರನ್ನು ಸದ್ದಿಲ್ಲದೆ ಬಲಿ ಪಡೆಯುತ್ತಿದೆ. ಕೆಲವರು ಒತ್ತಡವನ್ನು ಬುದ್ಧಿವಂತಿಕೆಯಿಂದ ಜಯಿಸುತ್ತಾರೆ. ಕೆಲವರಿಗೆ ಇದರಿಂದ ಹೊರ ಬರಲು ಸಾಧ್ಯವಾಗೋದಿಲ್ಲ. ಇದೇ ಅವರನ್ನು ನಾನಾ ರೀತಿಯಲ್ಲಿ ಹೈರಾಣ ಮಾಡುತ್ತದೆ. ಆರೋಗ್ಯ ಹಾಳು ಮಾಡುವುದಲ್ಲದೆ ಸಂಸಾರದಲ್ಲಿ ಸಮಸ್ಯೆ ಹುಟ್ಟು ಹಾಕುತ್ತದೆ. ಮಾನಸಿಕ ಸಮಸ್ಯೆ ಯಾವ ಕಾರಣಕ್ಕೆ ಶುರುವಾಗುತ್ತೆ ಎಂಬುದನ್ನು ಹೇಳೋದು ಕಷ್ಟ. ಒಬ್ಬೊಬ್ಬರು ಒಂದೊಂದು ಕಾರಣಕ್ಕೆ ಮಾನಸಿಕ ಆರೋಗ್ಯ ಹದಗೆಡುವುದಿದೆ. 

ವೈದ್ಯ (Doctor) ಹಾಗೂ ನರ್ಸ್ ಕೆಲಸ ಮಾಡಲು ಧೈರ್ಯ ಬೇಕು. ರಕ್ತ (Blood) ಹಾಗೂ ಖಾಸಗಿ ಭಾಗಗಳನ್ನು ಸದಾ ನೋಡುವ ವೈದ್ಯರಿಗೆ ಅದು ವಿಶೇಷವೆನ್ನಿಸುವುದಿಲ್ಲ. ಆದ್ರೆ ಜನಸಾಮಾನ್ಯರು ಹೆರಿಗೆ, ಅತಿಯಾದ ಬ್ಲೀಡಿಂಗ್ ನೋಡಿದ್ರೆ ಮೂರ್ಛೆ ಹೋಗ್ತಾರೆ. ಇಲ್ಲೊಬ್ಬ ವ್ಯಕ್ತಿ  ಪತ್ನಿಯ ಹೆರಿಗೆ ನೋಡಿ ತಲೆಕೆಡಿಸಿಕೊಂಡಿದ್ದಾನೆ. ಆತನ ದಾಂಪತ್ಯ ಕೂಡ ಮುರಿದು ಬಿದ್ದಿದೆ. ಆ ವ್ಯಕ್ತಿ ಈಗ ಆಸ್ಪತ್ರೆ (Hospital) ವಿರುದ್ಧ ದೂರು ದಾಖಲಿಸಿದ್ದಾನೆ. ಘಟನೆ ನಡೆದಿರೋದು ಆಸ್ಟ್ರೇಲಿಯಾದಲ್ಲಿ. ಪತ್ನಿಯ ಸಿ-ಸೆಕ್ಷನ್ ಡೆಲಿವರಿ ನೋಡಿ ತೀವ್ರ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದಾನೆ ವ್ಯಕ್ತಿ. ಆಸ್ಪತ್ರೆಯ ವಿರುದ್ಧ ಮೊಕದ್ದಮೆ ಹೂಡಿದ್ದಲ್ಲದೆ ಪತ್ನಿಯ ಹೆರಿಗೆಯನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಪರಿಹಾರ ನೀಡುವಂತೆ ಕೋರಿದ್ದಾನೆ. 72 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರ್ಡ್ ಮೊರೆ ಹೋಗಿದ್ದಾನೆ. ಆದ್ರೆ ಅವನಿಗೆ ಇದರಿಂದ ನಿರಾಸೆಯಾಗಿದೆ. 

ಒಂದು ಡ್ರಾಪ್‌ ಕೂಡ ಉಳಿಸದೇ ಬಾಟಲ್‌ನಿಂದ ಕೆಚಪ್ ತೆಗೆಯುವ ಟ್ರಿಕ್ಸ್‌ ಫುಲ್ ವೈರಲ್

ವ್ಯಕ್ತಿಯ ಹೆಸರು ಅನಿಲ್ ಕೊಪ್ಪುಳ. 2018ರ ಜನವರಿಯಲ್ಲಿ ಅನಿಲ್ ಪತ್ನಿ ಮಗುವಿಗೆ ಜನ್ಮ ನೀಡಿದ್ದರು. ಮಗು ಜನಿಸಿದ ಐದು ವರ್ಷಗಳ ನಂತರ ಅನಿಲ್ ಆಸ್ಪತ್ರೆಯ ವಿರುದ್ಧ ಆರೋಪ ಮಾಡಿದ್ದಾನೆ. ರಾಯಲ್ ವುಮೆನ್ಸ್ ಆಸ್ಪತ್ರೆಯವರು ಪತ್ನಿಯ ಸಿ-ಸೆಕ್ಷನ್ ಹೆರಿಗೆಯನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದರು. ಅದನ್ನು ನಾನು ವೀಕ್ಷಣೆ ಮಾಡಿದ್ದೆ. ಆದ್ರೆ ಅದೇ ನನ್ನ ಆರೋಗ್ಯವನ್ನು ಹಾಳು ಮಾಡಿದೆ. ಆಸ್ಪತ್ರೆ ಮಾಡಿದ ಕೆಲಸ ಸರಿಯಲ್ಲ. ನನಗೆ ಹೆರಿಗೆ ನೋಡಲು ಅವಕಾಶ ಮಾಡಿಕೊಟ್ಟ ಕಾರಣ ಆಸ್ಪತ್ರೆ ಸಿಬ್ಬಂದಿ ಕರ್ತವ್ಯವನ್ನು ಉಲ್ಲಂಘಿಸಿದ್ದಾರೆ ಎಂದು ಅನಿಲ್ ದೂರಿದ್ದಾರೆ. ಡೆಲಿವರಿ ನೋಡಿದ ನಂತರ ಅನಿಲ್ ಮನಸ್ಸು ಆಘಾತಕ್ಕೊಳಗಾಯಿತಂತೆ. ಮಾನಸಿಕ ಒತ್ತಡಕ್ಕೆ ಒಳಗಾಗಿದ್ದನಂತೆ. ಮಾನಸಿಕ ಒತ್ತಡದಿಂದ ದಾಂಪತ್ಯ ಮುರಿದು ಬಿತ್ತು ಎಂದು ಅನಿಲ್ ಆರೋಪ ಮಾಡಿದ್ದಾನೆ. 

Health Tips: ಉತ್ತಮ ಆರೋಗ್ಯಕ್ಕಾಗಿ ಖರ್ಜೂರವನ್ನು ಬೆಳಗ್ಗಿನ ಹೊತ್ತಲ್ಲಿ ತಿನ್ನಿ

ಈ ಆರೋಪವನ್ನು ಆಸ್ಪತ್ರೆ ತಳ್ಳಿ ಹಾಕಿದೆ :  ಹೆರಿಗೆಯ ಸಮಯದಲ್ಲಿ ತನ್ನ ಹೆಂಡತಿಯ ಆಂತರಿಕ ಅಂಗಗಳನ್ನು ನೋಡಿದ್ದ. ಆತನ ದೇಹದಿಂದ ಸಾಕಷ್ಟು ರಕ್ತ ಹೊರಬರುತ್ತಿರುವುದನ್ನು ಕೂಡ ಆತ ನೋಡಿದ್ದ. ಇದರಿಂದ ಆತನ ಮಾನಸಿಕ ಸ್ಥಿತಿ ಕ್ಷೀಣಿಸಲು ಪ್ರಾರಂಭಿಸಿತು. ಆಸ್ಪತ್ರೆ ಈತನ ಆರೋಪವನ್ನು ನಿರಾಕರಿಸಿದೆ. ಆಸ್ಪತ್ರೆ ತನ್ನ ಕರ್ತವ್ಯವನ್ನು ಉಲ್ಲಂಘಿಸಿದೆ ಎಂಬ ಆರೋಪ ಸಲ್ಲದು ಎದಿದೆ. ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣವನ್ನು ನ್ಯಾಯಾಧೀಶರು ವಿಚಾರಣೆ ನಡೆಸಿದ್ದಾರೆ. ಅನಿಲ್ ಗೆ ಪರಿಹಾರ ನೀಡಲು ಕೋರ್ಟ್ ನಿರಾಕರಿಸಿದ್ದಲ್ಲದೆ ಅರ್ಜಿ ವಜಾ ಮಾಡಿದೆ.

ನ್ಯಾಯಾಧೀಶರು ನೀಡಿದ ತೀರ್ಪೇನು : ಕೋರ್ಟ್ ವಿಚಾರಣೆ ವೇಳೆ ವ್ಯಕ್ತಿಯನ್ನು ತಪಾಸಣೆಗೊಳಪಡಿಸಲಾಗಿದೆ. ಈ ವೇಳೆ ವ್ಯಕ್ತಿ ಮಾನಸಿಕ ಒತ್ತಡವನ್ನು ಅನುಭವಿಸಿಲ್ಲ ಎಂಬುದು ತಿಳಿದು ಬಂದಿದೆ. ಪರಿಹಾರಕ್ಕೆ ಬೇಡಿಕೆ ಇಡುವತಂಹ ಹಾಗೂ ಚಿಕಿತ್ಸೆಗೆ ಹೆಚ್ಚು ಖರ್ಚಾಗುವಂತಹ ಯಾವುದೇ ಖಾಯಿಲೆ ವ್ಯಕ್ತಿಗೆ ಬಂದಿಲ್ಲವೆಂದು ಕೋರ್ಟ್ ಹೇಳಿದೆ. ಹಾಗಾಗಿ ವ್ಯಕ್ತಿಗೆ ಪರಿಹಾರ ನೀಡಬಾರದು ಎಂದು ಕೋರ್ಟ್ ತೀರ್ಪು ನೀಡಿದೆ. 

Latest Videos
Follow Us:
Download App:
  • android
  • ios