ಹಾಸನ, [ಜ.02]: ಸಮ್ಮಿಶ್ರ ಸರ್ಕಾರಕ್ಕೆ ಏನೂ ಆಗಲ್ಲ. ಎಲ್ಲ ಗೊಂದಲಗಳು ಕೆಲವೇ ದಿನಗಳಲ್ಲಿ ಅಂತ್ಯವಾಗಲಿವೆ ಎಂದು ಸಚಿವ ಹೆಚ್.ಡಿ.ರೇವಣ್ಣ ಅವರು ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಪ್ರಗತಿ ಪರಿಶೀಲನಾ ಸಭೆ ಬಳಿಕ  ಮಾತನಾಡಿದ ಅವರು, ಜನವರಿ 3 ರಿಂದ 13ರೊಳಗೆ ಎಲ್ಲವೂ ಸರಿ ಹೋಗಲಿದೆ ಅಂತಾ ನಾನೇ ಜೋತಿಷ್ಯ ನುಡಿಯುತ್ತಿದ್ದೇನೆ. ರಮೇಶ್ ಜಾರಕಿಹೊಳಿ ಅವರಿಗೆ ಸಣ್ಣ ಪ್ರಮಾಣದಲ್ಲಿ ಅಸಮಾಧಾನವಿದೆ. ಎಲ್ಲಾ ಸಚಿವರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಜನವರಿ 3 ರಿಂದ 13ರೊಳಗೆ ಎಲ್ಲವೂ ಸರಿ ಹೋಗಲಿದೆ ಅಂತಾ ನಾನೇ ಜೋತಿಷ್ಯ ನುಡಿಯುತ್ತಿದ್ದೇನೆ. ರಮೇಶ್ ಜಾರಕಿಹೊಳಿ ಅವರಿಗೆ ಸಣ್ಣ ಪ್ರಮಾಣದಲ್ಲಿ ಅಸಮಾಧಾನವಿದೆ. ಎಲ್ಲಾ ಸಚಿವರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ರಮೇಶಣ್ಣ ನನ್ನ ಅತ್ಮೀಯ ಗೆಳೆಯರು ಆಗಿದ್ದಾರೆ. ರಮೇಶಣ್ಣ, ನಾಗೇಂದ್ರಣ್ಣ ಸೇರಿದಂತೆ ಎಲ್ಲರನ್ನೂ ಜೊತೆಗಿಟ್ಟುಕೊಳ್ಳುತ್ತೇವೆ. ಈ ತಿಂಗಳ 3 ರಿಂದ 13 ರಿಂದ ಎಲ್ಲಾ ಸರಿ ಹೋಗುತ್ತದೆ, ಸಮ್ಮಿಶ್ರ ಸರ್ಕಾರ ಐದು ವರ್ಷವನ್ನು ಪೂರ್ಣಗೊಳಿಸುತ್ತದೆ ಎಂದು ರೇವಣ್ಣ ನುಡಿದರು.