ನವದೆಹಲಿ[ಜೂ.27] : ಕರ್ನಾಟಕದಲ್ಲಿ ನಕಲಿ ನೋಟಿನ ಮಾರಾಟ ದಂಧೆ ನಡೆಸುತ್ತಿದ್ದ ಇಬ್ಬರಿಗೆ ಆಂಧ್ರಪ್ರದೇಶದ ವಿಜಯವಾಡದ ಎನ್‌ಐಎ ವಿಶೇಷ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಹಾಗೂ ತಲಾ 30 ಸಾವಿರ ರು. ದಂಡ ವಿಧಿಸಿದೆ. 

ಕರ್ನಾಟಕದ ಮಂಡ್ಯ ಜಿಲ್ಲೆಯ ಮೊಹಮ್ಮದ್‌ ಮೆಹಬೂಬ್‌ ಬೇಗ್‌ ಮತ್ತು ಸೈಯದ್‌ ಇಮ್ರಾನ್‌ ಶಿಕ್ಷೆಗೆ ಗುರಿಯಾದವರಾಗಿದ್ದಾರೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ವಿಶಾಖಪಟ್ಟಣದ ರೈಲ್ವೇ ನಿಲ್ದಾಣದಲ್ಲಿ ನಕಲಿ ನೋಟು ಚಲಾವಣೆಗೆ ಯತ್ನಿಸುತ್ತಿದ್ದ ವೇಳೆ ಡಿಆರ್‌ಐ (ಡೈರಕ್ಟರೇಟ್‌ ರೆವೆನ್ಯೂ ಇಂಟೆಲಿಜೆನ್ಸ್‌) ದಾಳಿ ನಡೆಸಿ ಇವರನ್ನು ಬಂಧಿಸಿತ್ತು. 

ಈ ವೇಳೆ ಬಂಧಿತರಿಂದ    ಲಕ್ಷಾಂತರ ರು ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಾಂಗ್ಲಾದ ಅಂತಾರಾಷ್ಟ್ರೀಯ ಗಡಿಯಿಂದ ನಕಲಿ ನೋಟುಗಳನ್ನು ಪಡೆದುಕೊಂಡು, ಬೆಂಗಳೂರು ಮತ್ತು ಪಶ್ಚಿಮ ಬಂಗಾಳದ ಮಾಲ್ಡಾದಿಂದಲೂ ನಕಲಿ ನೋಟುಗಳ ಜಾಲ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.