ಉರಿ ಬಿಸಿಲಿನÜ ತಾಪಮಾನದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಹಿಂದೆಂದೂ ಕಾಣದ ತಾಪಮಾನ ಈಗ ಕಂಡುಬರುತ್ತಿದೆ. ದಿನ ಬೆಳಗಾಗಿ ಸೂರ್ಯ ಉದಯಿಸುತ್ತಿದ್ದಂತೆ ಪ್ರಾರಂಭವಾಗುವ ಬಿಸಿಲಿನ ತಾಪಮಾನ ಕ್ಷಣ ಕ್ಷಣಕ್ಕೂ ಹೆಚ್ಚುತ್ತ ಸಾಗುವ ಶೆಕೆಯಿಂದ ಜನರು ನಿಲ್ಲಲಾಗದೆ, ಕುಳಿತುಕೊಳ್ಳಲಾಗದೇ ಚಡಪಡಿಸುತ್ತಿದ್ದಾರೆ.

ಸಂತೋಷ ದೈವಜ್ಞ

 ಮುಂಡಗೋಡ (ಏ.20) : ಉರಿ ಬಿಸಿಲಿನÜ ತಾಪಮಾನದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಹಿಂದೆಂದೂ ಕಾಣದ ತಾಪಮಾನ ಈಗ ಕಂಡುಬರುತ್ತಿದೆ. ದಿನ ಬೆಳಗಾಗಿ ಸೂರ್ಯ ಉದಯಿಸುತ್ತಿದ್ದಂತೆ ಪ್ರಾರಂಭವಾಗುವ ಬಿಸಿಲಿನ ತಾಪಮಾನ ಕ್ಷಣ ಕ್ಷಣಕ್ಕೂ ಹೆಚ್ಚುತ್ತ ಸಾಗುವ ಸೆಕೆಯಿಂದ ಜನರು ನಿಲ್ಲಲಾಗದೆ, ಕುಳಿತುಕೊಳ್ಳಲಾಗದೇ ಚಡಪಡಿಸುತ್ತಿದ್ದಾರೆ.

ಮಧ್ಯಾಹ್ನದ ನಂತರವಂತೂ ಪ್ಯಾನ್‌ಗಳು ಕೂಡ ಬಿಸಿ ಗಾಳಿಯನ್ನು ಉಗುಳುತ್ತವೆ. ಬಿಸಿಲಿನ ಧಗೆ ಅಷ್ಟೊಂದು ಜೋರಾಗಿದೆ. ಹೊರಗೆ ತಿರುಗಾಡುವವರ ಪರಿಸ್ಥಿತಿಯಂತೂ ಹೇಳತೀರದು. ಬೆವರು ಸುರಿಸುತ್ತಲೇ ತಿರುಗಾಡಬೇಕು. ಚಪ್ಪಲಿ ಇಲ್ಲದೆ ನಡೆದಾಡುವವರ ಸ್ಥಿತಿಯಂತೂ ಆ ದೇವರಿಗೆ ಪ್ರೀತಿ.

ಬೆಂಗಳೂರಿನಲ್ಲಿ ನಿನ್ನೆ ವರ್ಷದ ಅತಿ ಹೆಚ್ಚು ಬಿಸಿಲು: 36.5ಕ್ಕೆ ತಲುಪಿದ ಉಷ್ಣಾಂಶ

ಹಿಂದೆ ಈ ಭಾಗದಲ್ಲಿ ಶೇ. 34-35 ಉಷ್ಣಾಂಶ ವರದಿಯಾದರೆ ಆಶ್ಚರ್ಯಪಡಬೇಕಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಶೇ. 38ಕ್ಕೂ ಅಧಿಕ ಉಷ್ಣಾಂಶ ದಾಖಲಾಗುತ್ತಿದೆ. ಇದು ಎಲ್ಲರಲ್ಲಿ ಆತಂಕ ಹುಟ್ಟಿಸಿದೆ. ವಿಜಯಪುರ, ಬೆಳಗಾವಿ, ಬಾಗಲಕೋಟೆ, ಬೀದರ, ರಾಯಚೂರು, ಬಳ್ಳಾರಿ ಸೇರಿದಂತೆ ಬಯಲು ಸೀಮೆ ಪ್ರದೇಶದಲ್ಲಿ ಮಾತ್ರ ಹೆಚ್ಚು ಉಷ್ಣಾಂಶ ಕಾಣಲಾಗುತ್ತಿತ್ತು. ಆದರೆ ಈಗ ಅರ್ಧಕ್ಕೂ ಹೆಚ್ಚು ಪ್ರದೇಶ ಅರಣ್ಯದಿಂದ ಕೂಡಿರುವ ಅರೆ ಮಲೆನಾಡು ಮುಂಡಗೋಡ ಭಾಗವು ಕೂಡ ಹೆಚ್ಚು ಉಷ್ಣಾಂಶ ಕಾಣುತ್ತಿದೆ. ಮಲೆನಾಡು ಕೂಡ ಬಯಲು ಸೀಮೆ ಪ್ರದೇಶಕ್ಕೆ ಹೊರತಾಗಿಲ್ಲ ಎಂಬುದನ್ನು ಸಾಬೀತುಪಡಿಸುತ್ತಿದೆ. ಅಂತರ್ಜಲ ಕ್ಷೀಣಿಸುತ್ತ ಸಾಗಿರುವುದರಿಂದ ಭೂಮಿ ಬರಡಾಗುತ್ತಿದೆ. ಬಿಸಿಲಿನ ತಾಪಮಾನಕ್ಕೆ ಅರಣ್ಯವೆಂಬುವುದು ರಣರಣವಾಗಿ ಭಾಸವಾಗುತ್ತಿದೆ.

ತಂಪು ಪಾನೀಯ, ಹಣ್ಣು:

ಬಿಸಿಲಿನ ತಾಪವನ್ನು ತಡೆಯಲಾಗದ ಜನ ತಂಪು ಪಾನೀಯದ ಮೊರೆ ಹೋಗುತ್ತಿದ್ದಾರೆ. ಬೇಸಿಗೆ ಪ್ರಾರಂಭವಾಗುವ ಮುನ್ನ ಪಟ್ಟಣದಲ್ಲಿ ಕೆಲವೇ ಕೆಲ ಸ್ಥಳಗಳಲ್ಲಿ ಮಾತ್ರ ಎಳನೀರಿನ ವ್ಯಾಪಾರ ನಡೆಯುತ್ತಿತ್ತು. ಆದರೆ ಈಗ ಪಟ್ಟಣದ ಎಲ್ಲ ಪ್ರದೇಶದಲ್ಲಿ ಎಳನೀರು ಕಾಣಸಿಗುತ್ತಿದೆ. ಎಳ ನೀರಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಪ್ಯಾಪಾರ ಕೂಡ ಜೋರಾಗಿಯೇ ನಡೆಯುತ್ತಿದೆ. ಜೊತೆಗೆ ಕಲ್ಲಂಗಡಿ, ಕರ್ಬೂಜ ಸೇರಿದಂತೆ ಮುಂತಾದ ಹಣ್ಣಿನ ವ್ಯಾಪಾರ ಕೂಡ ಬರದಿಂದ ಸಾಗಿದೆ.

ಜೀವಜಲದ ಕೊರತೆ:

ಭೂಮಿಯಲ್ಲಿನ ಅಂತರ್ಜಲ ಮಟ್ಟಕುಗ್ಗಿರುವುದರಿಂದ ಕುಡಿಯುವ ನೀರಿನ ಅಭಾವ ಎದುರಾಗಿದೆ. ತಾಲೂಕಿನ ಕೆಲ ಪ್ರದೇಶಗಳಲ್ಲಿ ಬೋರವೆಲ್‌ ನೀರು ಕಡಿಮೆಯಾಗಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಕೆಲವೆಡೆ ಸ್ಥಳಿಯ ಸಂಸ್ಥೆಗಳು ಬೇರೆ ಬೇರೆ ಕಡೆಯಿಂದ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ದೃಶ್ಯಗಳನ್ನು ನಾವು ಕಾಣಬಹುದಾಗಿದೆ.

ಪ್ರಾಣಿಗಳ ಅರಣ್ಯರೋಧನ:

ಬಿಸಿಲಿನ ಬೇಗೆಯಿಂದ ಗಿಡ ಮರಗಳೆಲ್ಲ ಒಣಗಿದ್ದು, ಸಣ್ಣ ಪುಟ್ಟಕೆರೆ ಕಟ್ಟೆಗಳು ಕೂಡ ಬತ್ತಿವೆ. ಕುಡಿಯುವ ನೀರು ಅರಸಿ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಅಲ್ಲಲ್ಲಿ ನೀರಿನ ತೊಟ್ಟಿಗಳನ್ನಿಟ್ಟು ಅದರಲ್ಲಿ ನೀರು ತುಂಬಿಸಿ ಕಾಡು ಪ್ರಾಣಿಗಳಿಗೆ ನೀರು ಕುಡಿಯಲು ಅನುಕೂಲ ಮಾಡುತ್ತಿದ್ದಾರೆ.

ವಿಧಾನಸಭಾ ಚುನಾವಣೆ: ನಗರದ ಬೀದಿಯಲ್ಲೇ ಓಡಾಡುತ್ತಾರೆ ಬಂದೂಕುಧಾರಿಗಳು!

ಬಿಸಿಲು ಹೆಚ್ಚಿದ್ದು, ಹೆಚ್ಚಿನ ಉಷ್ಣಾಂಶ ವರದಿಯಾಗುತ್ತಿದೆ. ಅರಣ್ಯ ಪ್ರದೇಶದೊಳಗಿನ ಸಣ್ಣ ಪುಟ್ಟಕೆರೆಗಳು ಬತ್ತಿ ಹೋಗಿವೆ. ಮಳೆ ಕೂಡ ಆಗದ ಕಾರಣ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ತೊಂದರೆ ಆಗದಿರಲೆಂದು ಅಗತ್ಯವಿರುವ ಅರಣ್ಯ ಪ್ರದೇಶಗಳಲ್ಲಿ ತೊಟ್ಟಿಗಳನ್ನು ನಿರ್ಮಿಸಿ ಹತ್ತಿರದ ಜಲಾಶಯಗಳಿಂದ ನೀರು ಸಾಗಿಸಿ ತೊಟ್ಟಿತುಂಬಿಸಲಾಗುತ್ತಿದೆ.

ಶ್ರೀಶೈಲ್‌ ವಾಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುಂಡಗೋಡ