ಮಂಡ್ಯ(ಫೆ.07):  ಮಂಡ್ಯದಲ್ಲಿ ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ರಾಜಕೀಯ ಜೋರಾಗಿದೆ. 

ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷಗಿರಿಗೆ ರೇಸ್ ಜೋರಾಗಿದೆ.  ಈಗಾಗಲೇ ಜಿಲ್ಲಾಡಳಿತ ಮೀಸಲಾತಿ ಪ್ರಕಟ ಮಾಡಿರುವ ಹಿನ್ನೆಲೆಯಲ್ಲಿ ರಾಜಕಾರಣವು ರಂಗೇರಿದೆ. 

ಮಂಡ್ಯ ಜಿಲ್ಲೆಯಾದ್ಯಂತ ಗ್ರಾಮ  ರೆಸಾರ್ಟ್ ರಾಜಕೀಯ ಶುರುವಾಗಿದೆ.  ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ರೆಸಾರ್ಟ್ ರಾಜಕೀಯ ನಡೆಸಲಾಗುತ್ತಿದೆ. 

JDS ಖಳನಾಯಕನಾಗಿಸಲು ಸಂಚು : ವಿಧಿ ಇಲ್ಲದೇ BJP ಜೊತೆ ಹೊಂದಾಣಿಕೆ' .

ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸದಸ್ಯರನ್ನು ರೆಸಾರ್ಟ್ ಕರೆದೊಯ್ಯುತ್ತಿದ್ದು, ವಿವಿಧ  ಪ್ರದೇಶಗಳಿಗೆ ಟೂರ್‌ಗೆ ಕರೆದೊಯ್ಯುತ್ತಿದ್ದಾರೆ.  ಭರ್ಜರಿ ಟೂರ್ ಪ್ಲಾನ್ ಹಾಗೂ ರೆಸಾರ್ಟ್ ವಾಸ್ಥವ್ಯದ ಬಗ್ಗೆಯೂ ಆಮಿಷ ಒಡ್ಡುತ್ತಿದ್ದಾರೆ. 

ಮಂಡ್ಯ ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯತ್‌ನಿಂದ ಟೂರ್ ಹಾಗೂ ರೆಸಾರ್ಟ್ ವಾಸ್ಥವ್ಯದ ಆಮಿಷ ಒಡ್ಡಲಾಗುತ್ತಿದೆ.