ಬೆಂಗಳೂರು(ಜು.26): ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗಲೆಲ್ಲಾ ಬರೀ ಸವಾಲುಗಳೇ. ಸಿದ್ದರಾಮಯ್ಯ ಇದ್ದಾಗ ಯಾವುದೇ ಸವಾಲುಗಳು ಇರಲಿಲ್ಲ. ಯಡಿಯೂರಪ್ಪ, ಎಸ್ ಎಂ ಕೃಷ್ಣ ಇದ್ದಾಗ ಬರೀ ಸವಾಲುಗಳು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಸಿದ್ದರಾಮಯ್ಯ ಇದ್ದಾಗ ಯಾವುದೇ ಸವಾಲು ಗಳು ಇರಲಿಲ್ಲ. ಯಡಿಯೂರಪ್ಪ, ಎಸ್ ಎಂ ಕೃಷ್ಣ ಇದ್ದಾಗ ಬರೀ ಸವಾಲುಗಳು. ಇವರಿಬ್ಬರೂ ಸಾಧನೆಗಳನ್ನು ಮಾಡಿದ್ದಾರೆ. ಮಂತ್ರಿ ಮಂಡಲ ರಚನೆಯಾಗದೆ ಇದ್ದಾಗ ಒಬ್ರೇ ಓಡಾಡಿ ನೊಂದ ಜನರಿಗೆ ನೆರವಾಗಿದ್ದಾರೆ ಎಂದು ಅವರು ಹೊಗಳಿದ್ದಾರೆ.

ಕೊರೋನಾ ಕಾಟ: ಗುಣಮುಖರಾಗಿ ಬಂದ ಆಶಾ ಕಾರ್ಯಕರ್ತೆಯರ ಗ್ರಾಮ ಪ್ರವೇಶಕ್ಕೆ ದಿಗ್ಬಂಧನ

ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಡಲು 5 ಲಕ್ಷ ರೂಪಾಯಿ ಕೊಟ್ಟವಂತವರು ಬಿಎಸ್‌ವೈ. ಬೇರೆ ರಾಜ್ಯದ ಸಿಎಂಗಳು ಹೊರಗೆ ಬರ್ತಿಲ್ಲ. ಕೊರೋನಾ ತಡೆಗೆ ಹೊರಗೆ ಬಂದು ಕೆಲಸ ಮಾಡ್ತಿದ್ದಾರೆ. ಈ ವಯಸ್ಸಲ್ಲೂ ಅವರು ಸಭೆಗಳನ್ನು ಮಾಡಿ ಕೊರೋನಾ ನಿಯಂತ್ರಣ ಮಾಡ್ತಿದ್ದಾರೆ ಎಂದಿದ್ದಾರೆ.

ಲಾಕ್ ಡೌನ್ ಸಡಿಲಿಕೆ ನಂತರ ಅಭಿವೃದ್ಧಿ ಕೆಲಸ ಮಾಡ್ತಿದ್ದಾರೆ. ಕಾರ್ಮಿಕರು, ಬಡವರು, ಕೃಷಿಕರಿಗೆ ಪರಿಹಾರ ಕೊಟ್ಟಿದ್ದಾರೆ. ಯಡಿಯೂರಪ್ಪ ಕೈಗುಣ ಒಳ್ಳೆಯದು. ಕಳೆದ ಬಾರಿಗಿಂತ ಈ ಬಾರಿ ರಸ ಗೊಬ್ಬರ, ಬಿತ್ತನೆ ಬೀಜ ವಿತರಣೆ ಮಾಡಿದ್ದೇವೆ. ಕಷ್ಟದ ಸಂದರ್ಭದಲ್ಲಿ ನೇತೃತ್ವ ಕೊಡುವಂತವನೇ ನಿಜವಾದ ನಾಯಕ. ಸುಖದಲ್ಲಿ ನಾಯಕತ್ವ ಕೊಟ್ರೆ ಅದಕ್ಕೆ ಬೆಲೆ ಇರಲ್ಲ ಎಂದಿದ್ದಾರೆ.

ಬೆಂಗ್ಳೂರಲ್ಲಿ 3 ಸಾವಿರಕ್ಕೂ ಹೆಚ್ಚು ಸೋಂಕಿತರ ಮೂಲವೇ ಗೊತ್ತಿಲ್ಲ..!

ಕಷ್ಟದಲ್ಲಿ ನಾಯಕತ್ವ ಕೊಡೋದೇ ಒಂದು ಸವಾಲು. ಈ ಸವಾಲನ್ನು ಯಡಿಯೂರಪ್ಪ ಸಮರ್ಥ ವಾಗಿ ನಿಭಾಯಿಸಿದ್ದಾರೆ. ಭಾನುವಾರ ಲಾಕ್ ಡೌನ್ ಮುಂದುವರಿಕೆಯಲಿದೆ. ಸದ್ಯಕ್ಕೆ ಭಾನುವಾರ ಲಾಕ್ ಡೌನ್ ಇದೆ. ಮುಂದೆಯೂ ಮುಂದುವರಿಕೆ ಬಗ್ಗೆ ಸಿಎಂ ತೀರ್ಮಾನ ಮಾಡ್ತಾರೆ ಎಂದಿದ್ದಾರೆ.